Thursday, December 1, 2022
spot_img
Homeಸುದ್ದಿಹಿಟ್ಲರ್‌ ಮುಖದ ಕೀಟ ಪತ್ತೆ

ಹಿಟ್ಲರ್‌ ಮುಖದ ಕೀಟ ಪತ್ತೆ


ಗದಗ: ಗದಗ ಜಿಲ್ಲೆಯ ಗಜೇಂದ್ರಗಡ ಬಳಿಯ ಭೈರಾಪುರ ಗುಡ್ಡದ ಮೇಲೆ ಹಿಟ್ಲರ್ ಮುಖವನ್ನು ಹೋಲುವ ಅಪರೂಪದ ಕೀಟ ಪತ್ತೆಯಾಗಿದೆ.ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಅಪರೂಪದ ಕೀಟ ಇದಾಗಿದ್ದು, ಹಳದಿ ಮೈ ಬಣ್ಣದಿಂದ ಕೂಡಿರುವ ಕೀಟ ಸುಂದರವಾಗಿದೆ. ವೈಜ್ಞಾನಿಕವಾಗಿ ಈ ಜೀವಿಯನ್ನು ‘ಕೆಟಾಕ್ಯಾಂಥಸ್ ಇನ್‌ಕಾರ್ನೇಟಸ್’ ಎಂದು ಕರೆಯುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಇದಕ್ಕೆ ‘ಹಿಟ್ಲರ್ ಕೀಟ’ ಎಂದೇ ಹೆಸರು. ಇಕ್ಸೋರಾ, ಗೇರು ಗಿಡ, ಗುಲ್‌ಮೋಹರ್ ಮತ್ತು ಶಿವನಿ ಮರಗಳ ಮೇಲೆ ಇವು ಆಶ್ರಯ ಪಡೆದು ಅಲ್ಲಿ ಆಹಾರ ಪಡೆದು ಜೀವಿಸುತ್ತವೆ.
ಈ ಕೀಟವು 30 ಎಂಎಂ ಗಾತ್ರವಿದ್ದು, ಸಸ್ಯಗಳ ಎಲೆಗಳ ಅಡಿಯಲ್ಲಿ ಹೆಣ್ಣು ಕೀಟವು 150-200 ಮೊಟ್ಟೆಗಳನ್ನಿಡುತ್ತದೆ. ಹಿಟ್ಲರ್ ಕೀಟ 7 ರಿಂದ 9 ತಿಂಗಳ ಜೀವಿತಾವಧಿ ಹೊಂದಿದೆ.
ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಮುಖವನ್ನು ಹೋಲುವ ಕಾರಣ ಅವುಗಳನ್ನು ‘ಹಿಟ್ಲರ್ ಬಗ್ಸ್’ ಎಂದೂ ಕರೆಯುತ್ತಾರೆ. ಶ್ರೀಲಂಕಾ, ಮ್ಯಾನ್ಮಾರ್, ಥೈಲ್ಯಾಂಡ್, ಇಂಡೋನೇಷ್ಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಈ ಕೀಟಗಳು ಸಾಮಾನ್ಯವಾಗಿ ಕಂಡುಬರುತ್ತವೆ.

LEAVE A REPLY

Please enter your comment!
Please enter your name here

Most Popular

error: Content is protected !!