Thursday, December 1, 2022
spot_img
Homeಸುದ್ದಿನ.27 : ಕುಕ್ಕುಂದೂರಿನಲ್ಲಿ ಬೃಹತ್‌ ಆರೋಗ್ಯ ಶಿಬಿರ

ನ.27 : ಕುಕ್ಕುಂದೂರಿನಲ್ಲಿ ಬೃಹತ್‌ ಆರೋಗ್ಯ ಶಿಬಿರ


ಕಾರ್ಕಳ: ಕುಕ್ಕುಂದೂರು ಫ್ರೆಂಡ್ಸ್ ಮುಂಬೈ, ಗ್ರಾಮ ಪಂಚಾಯತ್ ಕುಕ್ಕುಂದೂರು, ಶಾಂತಿ ಯುವಕ ವೃಂದ ಜಾರ್ಕಳ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ, ನ್ಯೂಸ್ ಕಾರ್ಕಳ, ಯೂತ್ ಬಿಲ್ಲವ ಕಾರ್ಕಳ, ಚಿನ್ನ – ಬೆಳ್ಳಿ ಕೆಲಸಗಾರರ ಸಂಘ ಕಾರ್ಕಳ, ಸೀತಾ ಮಾತಾ ಭಜನಾ ಮಂಡಳಿ ಕುಕ್ಕುಂದೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಹಾಗೂ ಡಾ| ಟಿ.ಎಂ.ಪೈ ರೋಟರಿ ಆಸ್ಪತ್ರೆ ಕಾರ್ಕಳ (ಕ್ಯಾಂಪ್ ಆಸ್ಪತ್ರೆ) ಸಹಯೋಗದಲ್ಲಿ ಬೃಹತ್ ಆರೋಗ್ಯ ಶಿಬಿರ ನ. 27 ರಂದು ಬೆಳಗ್ಗೆ 9.30 ರಿಂದ 1 ರ ವರೆಗೆ ಕುಕ್ಕುಂದೂರಿನ ಟಪ್ಪಾಲು ಕಟ್ಟೆ ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದೆ.
ಹೃದಯ, ಕಣ್ಣು ಮತ್ತು ಕಿವಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಪರಿಶೀಲಿಸಲಾಗುವುದು. ಎದೆ ನೋವು ಪರೀಕ್ಷೆ, ಅವಶ್ಯಕತೆ ಇದ್ದವರಿಗೆ ಉಚಿತ ಇ.ಸಿ.ಜಿ., ಟಿಬಿ, ಅಸ್ತಮಾ, ಮೈ ಕೈ ನೋವು, ರಕ್ತದೊತ್ತಡ (ಬಿಪಿ) ಮತ್ತು ಮಧುಮೇಹ ಪರೀಕ್ಷೆ, ನಿಶಕ್ತಿ, ಕೆಮ್ಮು, ಶೀತ, ಜ್ವರ, ಕಿವಿ ಸೋರುವುದು, ಕಡಿಮೆ ಕೇಳುವುದು, ತಲೆ ಸುತ್ತುವುದು, ಮೂಗಿನಲ್ಲಿ ದುರ್ಮಾಂಸ, ಮೂಗು ಕಟ್ಟುವುದು, ಥೈರಾಯ್ಡ್ ಸಮಸ್ಯೆ, ಕುತ್ತಿಗೆಯ ಭಾಗದಲ್ಲಿ ಗಡ್ಡೆ, ಕಣ್ಣು ತಪಾಸಣೆ, ಕಣ್ಣಿನಲ್ಲಿ ದುರ್ಮಾಂಸ, ದೃಷ್ಟಿ ಕಡಿಮೆ, ಕೆಂಪು ಕಣ್ಣು, ಕಣ್ಣಿನಲ್ಲಿ ಪೊರೆ ಇತ್ಯಾದಿ ಸಮಸ್ಯೆಗಳಿರುವವರು ಪರೀಕ್ಷೆ ಮಾಡಿಸಿಕೊಳ್ಳಬಹುದು.
ಹಿರಿಯ ಕಣ್ಣಿನ ತಜ್ಞ ಡಾ| ಚಿದಾನಂದ ಕುಲಕರ್ಣಿ, ಕಿವಿ, ಮೂಗು, ಗಂಟಲು ತಜ್ಞೆ ಡಾ| ಅನುಷಾ ಶೆಟ್ಟಿ, ಹೃದಯ ರೋಗ ತಜ್ಞ ಡಾ| ವಸಂತ ಕುಮಾರ್ ಮತ್ತಿತರ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಅವಶ್ಯಕತೆ ಇದ್ದವರಿಗೆ ವೈದ್ಯರ ಶಿಫಾರಸ್ಸಿನ ಮೇರೆಗೆ ಆಸ್ಪತ್ರೆಯಲ್ಲಿ ECHO TMT ಮಾಡುವ ವ್ಯವಸ್ಥೆ ಹಾಗೂ ಯಾವುದೇ ವಿಮೆ ಇಲ್ಲದವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು. ಕನ್ನಡಕ ಅವಶ್ಯಕತೆ ಇರುವವರಿಗೆ ಕನ್ನಡಕದ ವ್ಯವಸ್ಥೆ ಮಾಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ವತಿಯಿಂದ ಉಚಿತ ಬಿಪಿ, ಶುಗರ್ ಟೆಸ್ಟ್ ಮಾಡಲಾಗುವುದು. ಅಯುಷ್ಮಾನ್+ ಆಭಾ ಉಚಿತ ನೋಂದಾವಣಿ ಮಾಡಲಾಗುವುದು. ಬರುವಾಗ ಆಧಾರ್ ಕಾರ್ಡ್ ಮತ್ತು ಲಿಂಕ್ ಆಗಿರುವ ಫೋನ್ ನಂಬರ್ ತರಬೇಕು.

LEAVE A REPLY

Please enter your comment!
Please enter your name here

Most Popular

error: Content is protected !!