ಬೆಳ್ಮಣ್: ಜೇಸಿಐ ಘಟಕದ 43ನೇ ವರ್ಷದ ಪದಗ್ರಹಣ ಸಮಾರಂಭ

ಕಾರ್ಕಳ: ಸಮಾಜಮುಖಿ ಚಿಂತನೆಯನ್ನೊಳಗೊಂಡ ಉತ್ತಮ ನಾಯಕರನ್ನು ಜೇಸಿಐ ಸಮಾಜಕ್ಕೆ ನೀಡುತ್ತಿದೆ. ಉತ್ತಮ ಕಾರ್ಯಚಟುವಟಿಕೆಗಳ ಮೂಲಕ ಮಾದರಿ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಕರ್ನಾಟಕ ಮೀನುಗಾರಿಕಾ ನಿಗಮ ಮಂಡಳಿಯ ನಿರ್ದೇಶಕಿ ಕಟಪಾಡಿ ಗೀತಾಂಜಲಿ ಸುವರ್ಣ ಹೇಳಿದರು. ಅವರು ನ.12 ರಂದು ಬೆಳ್ಮಣ್ ಗ್ರಾ. ಪಂ. ಸಭಾಂಗಣದಲ್ಲಿ ನಡೆದ ಬೆಳ್ಮಣ್ ಜೇಸಿಐನ 43ನೇ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಜೇಸಿಐ ಸಮಾಜದ ಅಭಿವೃದ್ಧಿಯಲ್ಲಿ ಪ್ರಗತಿಪರ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಸಂಸ್ಥೆಯಿಂದ ನಡೆಯುತ್ತಿರುವ ಈ ಕಾರ್ಯ ಹೀಗೆ ನಿರಂತರವಾಗಿರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸನ್ಮಾನ:
ನಿರ್ಗಮನ ಅಧ್ಯಕ್ಷ ಸಾಂತೂರು ವೀಣೇಶ್ ಅಮೀನ್ ಅವರಿಗೆ ಅಭಿನಂದನಾ ಸನ್ಮಾನ ನಡೆಸಲಾಯಿತು. ಜೇಸಿಐ ವಲಯ 15ರ ನಿಯೋಜಿತ ವಲಯಾಧ್ಯಕ್ಷ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಪೂರ್ವಾಧ್ಯಕ್ಷ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ನೂತನ ಅಧ್ಯಕ್ಷರ ಪರಿಚಯ ವಾಚಿಸಿ ಅಭಿನಂದನಾ ಭಾಷಣ ಮಾಡಿದರು.

ಮೈಸೂರು ಎಸ್.ಐ.ಆರ್.ಡಿ. ತರಬೇತಿ ಸಂಯೋಜಕಿ ಸುಧಾಮಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಘಟಕದ ಕಾರ್ಯದರ್ಶಿ ಸರಿತಾ ದಿನೇಶ್ ಸುವರ್ಣ, ಮಹಿಳಾ ಜೇಸಿ ಸಂಯೋಜಕಿ ಸೌಜನ್ಯ ಸತೀಶ್ ಕೋಟ್ಯಾನ್, ಜೂನಿಯರ್ ಜೇಸಿ ಅಧ್ಯಕ್ಷ ಕೀರ್ತನ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳ ಪರಿಚಯವನ್ನು ಘಟಕದ ಪೂವಾಧ್ಯಕ್ಷ ರವಿರಾಜ್ ಶೆಟ್ಟಿ ಮತ್ತು ಸಂಜೀವ ಪೂಜಾರಿ ಹಾಗೂ ನೂತನ ಸದಸ್ಯರ ಪರಿಚಯವನ್ನು ಘಟಕದ ನಿರ್ದೇಶಕ ರಾಜೇಶ್ ಕುಲಾಲ್ ವಾಚಿಸಿದರು.





























































































































































































































error: Content is protected !!
Scroll to Top