Thursday, December 1, 2022
spot_img
Homeಸುದ್ದಿಮೂರು ಮಾರ್ಗ - ಆನೆಕೆರೆ ರಸ್ತೆ ದುರಸ್ತಿ ವಿಳಂಬ : ಮತ್ತೊಮ್ಮೆ ಪ್ರತಿಭಟನೆಗೆ - ಶುಭದ...

ಮೂರು ಮಾರ್ಗ – ಆನೆಕೆರೆ ರಸ್ತೆ ದುರಸ್ತಿ ವಿಳಂಬ : ಮತ್ತೊಮ್ಮೆ ಪ್ರತಿಭಟನೆಗೆ – ಶುಭದ ರಾವ್ ‌ಎಚ್ಚರಿಕೆ

ಕಾರ್ಕಳ : ನಗರದ ಮೂರು ಮಾರ್ಗ ಆನೆಕೆರೆ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ರಸ್ತೆಯೆಲ್ಲಾ ಧೂಳಿನಿಂದ ಕೂಡಿದೆ. ಇದರ ಪರಿಣಾಮವಾಗಿ ರಸ್ತೆಗೆ ನೀರು ಹಾಯಿಸುವುದೇ ವ್ಯಾಪಾರಸ್ತರ ಪ್ರತಿನಿತ್ಯದ ಕೆಲಸವಾಗಿದೆ. ಸಚಿವರು ಈ ರಸ್ತೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತಾಳಿದ್ದು, ಮತ್ತೊಮ್ಮೆ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಕಾಂಗ್ರೇಸ್ ವಕ್ತಾರ, ಪುರಸಭಾ ಸದಸ್ಯ ಶುಭದ ರಾವ್ ಎಚ್ಚರಿಕೆ ನೀಡಿದ್ದಾರೆ.
ರಸ್ತೆ ದುರಸ್ತಿ ಬಗ್ಗೆ ಪುರಸಭೆಯನ್ನು ಕೇಳಿದರೆ ಲೋಕೋಪಯೋಗಿ ಇಲಾಖೆ ಹೊಣೆ ಎನ್ನುತಾರೆ. ಲೋಕೋಪಯೋಗಿ ಇಲಾಖೆಯನ್ನು ಕೇಳಿದರೆ ಟೆಂಡರ್ ಆಗಿದೆ, ಏತ ನಿರಾವರಿ ಯೋಜನೆಯ ಪೈಪ್ ಲೈನ್ ಕೆಲಸವಾಗದೇ ಡಾಮರೀಕರಣ ಸಾಧ್ಯವಿಲ್ಲವೆನ್ನುತ್ತಾರೆ. ನೀರಾವರಿ ಇಲಾಖೆಯವರನ್ನು ಕೇಳಿದರೆ ಪೈಪ್ ಲೈನ್ ಎಲ್ಲಿಂದ ಹೋಗಬೇಕು ಎಂದು ಇನ್ನೂ ಅಂತಿಮವಾಗಿಲ್ಲ ಹೇಳುತ್ತಾರೆ. ಇಲಾಖೆಗಳ ನಡುವೆಯೇ ಹೊಂದಾಣಿಕೆಯ ಕೊರತೆ ಇದೆ. ಯಾರ ಬಳಿಯೂ ಸಮರ್ಪಕ ಉತ್ತರವಿಲ್ಲ. ಈ ಮಧ್ಯೆ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಮೌನವಾಗಿದ್ದಾರೆ ಎಂದು ಶುಭದ ರಾವ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನೋವಿಗೆ ಸ್ಪಂದಿಸುವವರು ಯಾರು?
ಇಲಾಖಾ ಅಧಿಕಾರಿಗಳ ಸಭೆ ಕರೆದು ಶೀಘ್ರ ಕಾಮಗಾರಿಗೆ ಸೂಚಿಸುವುದು ಸಚಿವರ ಜವಾಬ್ದಾರಿಯಲ್ಲವೇ ? ಇಲ್ಲವಾದರೆ ಜನರ ನೋವಿಗೆ ಸ್ಪಂದಿಸುವವರು ಯಾರು ? ಎಂದು ಶುಭದಾ ಪ್ರಶ್ನಿಸಿದ್ದಾರೆ.

ಕಾಣೆಯಾಗಿದ್ದಾರೆ
ಈ ಹಿಂದೆ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆದಾಗ ಹೇಳಿಕೆಗಳನ್ನು ನೀಡಿ ಪ್ರತಿಭಟನಾಕಾರರನ್ನು ಅವಮಾನಿಸುತ್ತಿದ್ದ ಬಿಜೆಪಿ ನಾಯಕರು ಕಾಣೆಯಾಗಿದ್ದಾರೆ. ಅವರಿಗೆ ಜನರು ಸಂಕಷ್ಟ ಪಡುವುದು ಕಾಣುದಿಲ್ಲವೇ ? ಒಂದು ವೇಳೆ ನೀರಾವರಿ ಇಲಾಖೆಯ ಪೈಪ್ ಲೈನ್ ಕಾಮಗಾರಿ ಕೆಲಸ ಇದ್ದರೂ ಅವರು ಇಷ್ಟು ದಿನ ಏನು ಮಾಡುತಿದ್ದರು ? ಇದಕ್ಕೆ ಸಚಿವರ ನಿರ್ಲಕ್ಷ್ಯವೇ ಕಾರಣವಾಗಿದೆ. ಸಚಿವರು ತಕ್ಷಣ ಈ ಬಗ್ಗೆ ಕ್ರಮ ಜರುಗಿಸಬೇಕು ಇಲ್ಲವಾದರೆ ಮತ್ತೊಮ್ಮೆ ಪ್ರತಿಭಟನೆ ಅನಿವಾರ್ಯವಾದಿತು ಎಂದು ಶುಭದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!