Tuesday, December 6, 2022
spot_img
Homeಸುದ್ದಿಉಕ್ರೇನ್‌ ಕುಟುಂಬದಿಂದ ಕೊರಗಜ್ಜನಿಗೆ ಅಗೆಲು ಸೇವೆ

ಉಕ್ರೇನ್‌ ಕುಟುಂಬದಿಂದ ಕೊರಗಜ್ಜನಿಗೆ ಅಗೆಲು ಸೇವೆ

ಮಗನ ಆರೋಗ್ಯ ಚೇತರಿಕೆಗಾಗಿ ಹೇಳಿಕೊಂಡ ತೀರಿಸಿದ ವಿದೇಶಿ ದಂಪತಿ

ಮಂಗಳೂರು: ತುಳುನಾಡಿನ ಕಾರಣಿಕ ದೈವ ಕೊರಗಜ್ಜ ಮತ್ತೆ ಪವಾಡ ಮೆರೆದಿದೆ. ತಮ್ಮ ಕುಟುಂದ ಕಷ್ಟವನ್ನು ನೀಗಿಸಿದ್ದಕ್ಕೆ ಉಕ್ರೇನ್ ದೇಶದ ಕುಟುಂಬವೊಂದು ದಕ್ಷಿಣ ಕನ್ನಡಕ್ಕೆ ಬಂದು ಕೊರಗಜ್ಜನಿಗೆ ಹೇಳಿದ್ದ ಹರಕೆಯನ್ನು ಪೂರೈಸಿದೆ.
ಕೆಲವು ತಿಂಗಳ ಹಿಂದೆ ಉಕ್ರೇನ್ ಪ್ರಜೆ ಆ್ಯಂಡ್ರೊ, ಪತ್ನಿ ಎಲೆನಾ ಮತ್ತು ಮಗ ಮ್ಯಾಕ್ಸಿಂ ಭಾರತಕ್ಕೆ ಪ್ರವಾಸ ಬಂದಿದ್ದರು. ಉಕ್ರೇನ್ ದಂಪತಿ ಮಗ ಮ್ಯಾಕ್ಸಿಂನ ನರದ ಸಮಸ್ಯೆಯ ಚಿಕಿತ್ಸೆಗಾಗಿ ನಾಡಿ ನೋಡಿ ಔಷದಿ ಕೊಡುವ ಭಕ್ತಿಭೂಷಣ್ ಪ್ರಭೂಜಿ ಅವರನ್ನು ಭೇಟಿ ಮಾಡಿದ್ದರು.
ಈ ಚಿಕಿತ್ಸೆಗಾಗಿ ಮೂರು ತಿಂಗಳಿಂದ ದಂಪತಿ ಬಂಟ್ವಾಳದ ಕುಮ್ಡೇಲುವಿನ ಶ್ರೀ ರಾಧಾ ಸುರಭೀ ಗೋ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು. ಜನ್ಮಾಷ್ಟಮಿಯ ಸಂದರ್ಭದಲ್ಲಿ ನಡೆದ ಕೊರಗಜ್ಜನ ಕೋಲವೊಂದರಲ್ಲಿ ಮಗನ ಆನಾರೋಗ್ಯ ಸಮಸ್ಯೆ ಪರಿಹಾರವಾಗಲಿ ಎಂದು ಕೋರಿಕೊಂಡಿದ್ದಾರೆ. ಮಗ ಹುಷಾರದಾರೆ ಕೊರಗಜ್ಜನಿಗೆ ಅಗೇಲು ಸೇವೆ ನೀಡುವುದಾಗಿ ಹರಕೆ ಹೊತ್ತಿದ್ದಾರೆ. ಇದೀಗ ಮಗ ಮಾಕ್ಸಿಂ ಗುಣಮುಖನಾಗಿದ್ದು, ಉಕ್ರೇನ್ ದಂಪತಿ ಪುದು ಗ್ರಾಮದ ಕೊಡ್ಮಣ್ಣು ಎಂಬಲ್ಲಿ ಕೊರಗಜ್ಜನಿಗೆ ಅಗೇಲು ಸೇವೆಯನ್ನು ಅರ್ಪಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ಕುಟುಂಬ ಮತ್ತೆ ಉಕ್ರೇನ್‌ಗೆ ಮರಳಲಿದೆ. ಕೊರಗಜ್ಜನ ದಯೆಯಿಂದ ಮಗ ಹುಷಾರಾದ ಸಂತೃಪ್ತ ಭಾವ ವಿದೇಶೀ ಕುಟುಂಬದಲ್ಲಿ ಮೂಡಿದೆ.

LEAVE A REPLY

Please enter your comment!
Please enter your name here

Most Popular

error: Content is protected !!