Saturday, December 10, 2022
spot_img
Homeಸ್ಥಳೀಯ ಸುದ್ದಿಸ್ವಚ್ಛ ಕಾರ್ಕಳ ಬ್ರಿಗೇಡ್‌ : ಸ್ವಚ್ಛ ಮಾರ್ಗಮ್ ವಿಶೇಷ ಅಭಿಯಾನ

ಸ್ವಚ್ಛ ಕಾರ್ಕಳ ಬ್ರಿಗೇಡ್‌ : ಸ್ವಚ್ಛ ಮಾರ್ಗಮ್ ವಿಶೇಷ ಅಭಿಯಾನ

ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್ ಮತ್ತು ಸ್ಥಳೀಯರೊಂದಿಗೆ ಕೈ ಜೋಡಿಸಿ ಕಾರ್ಕಳದ ರಸ್ತೆಯನ್ನು ಸ್ವಚ್ಛತೆ ಮಾಡುವ ವಿಶೇಷ ಅಭಿಯಾನ ಸ್ವಚ್ಛ ಮಾರ್ಗಮ್ ಭಾನುವಾರ ನ.13 ರಂದು ಮುಂಜಾನೆ ಗಂಟೆ 6 ರಿಂದ 8ರತನಕ ಜರುಗಿತು. ಅಭಿಯಾನದ ಪ್ರಯುಕ್ತ ದಾನಶಾಲೆ ಗೊಮ್ಮಟಬೆಟ್ಟ ರಸ್ತೆಯಿಂದ ಗ್ಯಾಸ್ ಗೋಡೌನ್ ತನಕ ಸ್ವಚ್ಛತೆಯನ್ನು ಸ್ಥಳೀಯ 60 ಮನೆಗಳ ನಿವಾಸಿಗಳೊಂದಿಗೆ ಸೇರಿ ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರಾದ ನಿರಂಜನ್ ಜೈನ್, ಅತುಲ್ ಜೈನ್ ಮತ್ತು ಎಂ. ಕೆ. ವಿಪುಲ್ ಇವರ ನೇತ್ರತ್ವದಲ್ಲಿ ರಸ್ತೆಯುದ್ದಕ್ಕೂ ಬೆಳೆದಿದ್ದ ಗಿಡಗಂಟಿಗಳು, ಹುಲ್ಲು, ಚಾಕೊಲೇಟ್ ಪ್ಲಾಸ್ಟಿಕ್‌ ಸಿಪ್ಪೆಗಳು, ಬಾಟಲಿಗಳು, ತಿಂಡಿ ಪೊಟ್ಟಣಗಳು ​​ಮುಂತಾದ ಪ್ಲಾಸ್ಟಿಕ್‌ಗಳ ರಾಶಿಯನ್ನು ಪ್ರತ್ಯೇಕಿಸಿ, ಚರಂಡಿಗಳ ಸ್ವಚ್ಛತೆಯನ್ನು ಮಾಡಲಾಯಿತು.
ಪಾದಚಾರಿಗಳು ರಸ್ತೆ ಬದಿ ಕಸ ಎಸೆಯುವ ಸಮಸ್ಯೆ ನಿವಾರಣೆಗೆ ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯ ಫೆಲಿಕ್ಸ್ ವಾಝ್ ತಯಾರಿಸಿದ ಮಿನಿ ಡಸ್ಟ್‌ಬಿನ್‌ಗಳನ್ನು ರಸ್ತೆಯುದ್ದಕ್ಕೂ ಈ ಸಂದರ್ಭದಲ್ಲಿ ಅಳವಡಿಸಲಾಯಿತು. ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಸದಸ್ಯ ಪ್ರದೀಪ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ನಿವಾಸಿಗಳಿಗೆ ತ್ಯಾಜ್ಯ ವಿಂಗಡಣೆಯ ಅಗತ್ಯದ ಬಗ್ಗೆ ತಿಳಿವಳಿಕೆ ನೀಡಲಾಯಿತು. ಕ್ಷೇತ್ರದ ಪ್ರಮುಖ ಮಾಜಿ ಉಪತಶೀಲ್ದಾರ್ ಪ್ರಭಚಂದ್ರ ಜೈನ್, ನ್ಯಾಯವಾದಿ ವರ್ಧಮಾನ್ ಕದಂಬ, ಶೈಲೇಶ್ ಆರಿಗ, ಹರೀಶ್, ತಾರಾನಾಥ್, ಶಾಂತಿ ಡಿಸೋಜ, ಅಥಿತ್ ಭಂಡಾರಿ, ಸುರೇಶ ಇಂದ್ರ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!