Saturday, December 10, 2022
spot_img
Homeಸುದ್ದಿಮಂಗಳೂರಿಗೆ ಬರುತ್ತಿದ್ದ ಬಸ್‌ ಧಾರವಾಡ ಸಮೀಪ ಬೆಂಕಿಗಾಹುತಿ

ಮಂಗಳೂರಿಗೆ ಬರುತ್ತಿದ್ದ ಬಸ್‌ ಧಾರವಾಡ ಸಮೀಪ ಬೆಂಕಿಗಾಹುತಿ

30ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್‌ ಪಾರು

ಹುಬ್ಬಳ್ಳಿ : ಮುಂಬಯಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಧಾರವಾಡ ಸಮೀಪ ಹೊತ್ತಿ ಉರಿದ ಘಟನೆ ಭಾನುವಾರ ನಸುಕಿನ ಹೊತ್ತು ಸಂಭವಿಸಿದೆ. ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದು ರೇಷ್ಮಾ ಟ್ರಾವೆಲ್ಸ್‌ ಸಂಸ್ಥೆಗೆ ಸೇರಿದ ಬಸ್‌ ಎನ್ನಲಾಗಿದೆ. ನಸುಕಿನ 2 ಗಂಟೆ ಹೊತ್ತಿಗೆ ಚಲಿಸುತ್ತಿದ್ದ ಬಸ್ಸಿಗೆ ದಿಢೀರ್‌ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಚಾಲಕ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಸಿದ ಕಾರಣ ಭಾರಿ ಅನಾಹುತವೊಂದು ತಪ್ಪಿತು. ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ಆದರೆ ಬಸ್‌ ಬಹುತೇಕ ಸುಟ್ಟು ಹೋಗಿದೆ.
ಟಯರ್‌ ಸ್ಫೋಟಗೊಂಡ ಪರಿಣಾಮ ಬಸ್ಸಿಗೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಬೆಂಕಿ ನಂದಿಸಲು ಸುಮಾರು ಎರಡು ತಾಸು ಹಿಡಿದಿದೆ.

LEAVE A REPLY

Please enter your comment!
Please enter your name here

Most Popular

error: Content is protected !!