Saturday, December 10, 2022
spot_img
Homeಸುದ್ದಿಅರವಿಂದ ಕೇಜ್ರಿವಾಲ್‌ ವಿರುದ್ಧ ಸುಕೇಶ್‌ ಚಂದ್ರಶೇಖರ್‌ ಇನ್ನೊಂದು ಲೆಟರ್‌ ಬಾಂಬ್‌

ಅರವಿಂದ ಕೇಜ್ರಿವಾಲ್‌ ವಿರುದ್ಧ ಸುಕೇಶ್‌ ಚಂದ್ರಶೇಖರ್‌ ಇನ್ನೊಂದು ಲೆಟರ್‌ ಬಾಂಬ್‌

ವಿದೇಶಿ ಪತ್ರಿಕೆಯಲ್ಲಿ ಹಣ ಕೊಟ್ಟು ಲೇಖನ ಹಾಕಿಸಿದ್ದಾಗಿ ಆರೋಪ

ಹೊಸದಿಲ್ಲಿ : ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ 50 ಕೋ.ರೂ. ಕೊಟ್ಟಿದ್ದೇನೆ ಎಂದು ಪತ್ರ ಬರೆದು ಬಹಿರಂಗಪಡಿಸಿದ್ದ ಜೈಲಿನಲ್ಲಿರುವ ಬಹುಕೋಟಿ ರೂಪಾಯಿ ವಂಚಕ ಸುಕೇಶ್‌ ಚಂದ್ರಶೇಖರ್‌ ಇದೀಗ ಇನ್ನೊಂದು ಪತ್ರ ಬರೆದು ದಿಲ್ಲಿ ಸರಕಾರದ ಸಂಕಟವನ್ನು ಮತ್ತಷ್ಟು ಹೆಚ್ಚಿಸಿದ್ದಾನೆ.
ಈ ಪತ್ರದಲ್ಲಿ ಸುಕೇಶ್‌ ದಿಲ್ಲಿ ಸರಕಾರದ ಅಭಿವೃದ್ಧಿ ಹೇಳಿಕೆಗಳಲ್ಲ ಬೊಗಳೆ, ಹಣಕೊಟ್ಟು ಪತ್ರಿಕೆಗಳಲ್ಲಿ ಆಮ್‌ ಆದ್ಮಿ ಪಾರ್ಟಿ ತನ್ನ ಇಲ್ಲದ ಅಭಿವೃದ್ಧಿಯ ಬಗ್ಗೆ ಪ್ರಚಾರ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾನೆ.
ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲಿ ದಿಲ್ಲಿಯ ಶಾಲೆಗಳು ಮತ್ತು ಶಿಕ್ಷಣ ಕ್ರಾಂತಿಯ ಬಗ್ಗೆ ಬಂದಿರುವ ದೊಡ್ಡ ಲೇಖನ ನಿಜವಾಗಿ ಹಣಕೊಟ್ಟು ಹಾಕಿದ ಜಾಹೀರಾತು ಆಗಿತ್ತು. ಈ ಜಾಹೀರತು ಪ್ರಕಟ ಮಾಡಲು ಪ್ರಚಾರ ಏಜೆನ್ಸಿಯನ್ನು (ಪಿಆರ್‌ ಏಜೆನ್ಸಿಯನ್ನು) ನಾನೇ ಗೊತ್ತು ಮಾಡಿಕೊಟ್ಟಿದ್ದೆ. ಇದಕ್ಕಾಗಿ ಏಜೆನ್ಸಿಗೆ ಸುಮಾರು 7 ಕೋಟಿ ರೂ. ಮತ್ತು ಅದರ ಮೇಲೆ ಶೆ.15 ಕಮಿಷನ್‌ ನೀಡಲಾಗಿದೆ.ಇದು ನಾನು ಆಪ್‌ಗೆ ಕೊಟ್ಟ ಹಣ ಎಂದು ಸುಕೇಶ್‌ ಆರೋಪಿಸಿದ್ದಾನೆ.
ಈ ಲೇಖನವನ್ನು ಬಿಜೆಪಿ ಕೂಡ ಹಣ ಕೊಟ್ಟು ಹಾಕಿಸಿದ ಜಾಹೀರಾತು ಎಂದು ಟೀಕಿಸಿತ್ತು. ಆದರೆ ಪತ್ರಿಕೆ ತಾನು ಅಧ್ಯಯನ ಮಾಡಿ ಬರೆದ ಲೇಖನ ಎಂದು ಸಮರ್ಥಿಸಿಕೊಂಡಿತ್ತು. ಈಗ ಸುಕೇಶ್‌ ಚಂದ್ರಶೇಖರ್‌ ಮಾಡಿರುವ ಆರೋಪ ಬಿಜೆಪಿ ಹೇಳಿಕೆಯನ್ನು ಸಮರ್ಥಿಸುತ್ತಿದೆ. ತಾನು ಸುಳ್ಳುಪತ್ತೆ ಪರೀಕ್ಷೆಗೊಳಪಡಲು ಸಿದ್ಧನಿದ್ದೇನೆ. ಅರವಿಂದ ಕೇಂಜ್ರಿವಾಲ್‌ ಮತ್ತು ಸಚಿವ ಸತ್ಯೇಂದ್ರ ಜೈನ್‌ ಕೂಡ ಸುಳ್ಳು ಪತ್ತೆ ಪರೀಕ್ಷೆಗೊಳಪಡಲಿ ಎಂದು ಸುಕೇಶ್‌ ಸವಾಲು ಹಾಕಿದ್ದಾನೆ.

LEAVE A REPLY

Please enter your comment!
Please enter your name here

Most Popular

error: Content is protected !!