Thursday, December 1, 2022
spot_img
Homeಸುದ್ದಿ100 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಓವೈಸಿ ಪಕ್ಷ ನಿರ್ಧಾರ

100 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಓವೈಸಿ ಪಕ್ಷ ನಿರ್ಧಾರ

ಕಾಂಗ್ರೆಸ್‌, ಜೆಡಿಎಸ್‌ಗೆ ಮತ ವಿಭಜನೆ ಭೀತಿ

ಬೆಂಗಳೂರು : ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷ ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದೆ. ಎಐಎಂಐಎಂ ಕನಿಷ್ಠ 100 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಈ ಚುನಾವಣೆಗೆ ಪಕ್ಷವು ವಿಶೇಷ ಯೋಜನೆ ರೂಪಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ 52 ವಿಧಾನಸಭಾ ಸ್ಥಾನಗಳ ಮೇಲೆ ಎಐಎಂಐಎಂ ಕಣ್ಣಿಟ್ಟಿದೆ. ಎಸ್‌ಸಿ, ಎಸ್‌ಟಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಷೇತ್ರಗಳನ್ನು ಆಯದುಕೊಳ್ಳಲಿದೆ.
ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ರಾಯಚೂರು, ಬಸವಕಲ್ಯಾಣ, ಹುಬ್ಬಳ್ಳಿ, ಬೆಳಗಾವಿ, ಕುಷ್ಟಗಿ ಕ್ಷೇತ್ರಗಳಲ್ಲಿ ಎಐಎಂಐಎಂ ಮುಂದಿನ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಎಂದು ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ಘನಿ ಹೇಳಿದ್ದಾರೆ.
2018ರ ಚುನಾವಣೆಯಲ್ಲಿ ಎಐಎಂಐಎಂ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಇದರಿಂದ ಎಐಎಂಐಎಂಗೆ ಯಾವುದೇ ಲಾಭವಾಗರಲಿಲ್ಲ. ಹೀಗಾಗಿ ಈ ಸಲ ಸ್ವತಂತ್ರವಾಗಿ ಕಣಕ್ಕಿಳಿಲು ತೀರ್ಮಾನಿಸಿದೆ. ಎಐಎಂಐಎಂ ಸ್ಪರ್ಧೆಯಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಸಮಸ್ಯೆಯಾಗಲಿದೆ. ಅವುಗಳ ಸಾಂಪ್ರದಾಯಿಕ ಮುಸ್ಲಿಂ ವೋಟ್‌ಬ್ಯಾಂಕ್‌ನ್ನು ಎಐಎಂಐಎಂ ವಿಭಜಿಸುತ್ತದೆ.

LEAVE A REPLY

Please enter your comment!
Please enter your name here

Most Popular

error: Content is protected !!