Saturday, December 10, 2022
spot_img
Homeಸುದ್ದಿನ.14 : ನಿಟ್ಟೆ ಕಾಲೇಜಿನಲ್ಲಿ ಸಿಗ್ನಲ್ ಪ್ರೊಸೆಸಿಂಗ್ ಕುರಿತು 5 ದಿನಗಳ ಕಾರ್ಯಾಗಾರ

ನ.14 : ನಿಟ್ಟೆ ಕಾಲೇಜಿನಲ್ಲಿ ಸಿಗ್ನಲ್ ಪ್ರೊಸೆಸಿಂಗ್ ಕುರಿತು 5 ದಿನಗಳ ಕಾರ್ಯಾಗಾರ

ಕಾರ್ಕಳ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ವಿಭಾಗವು ಬೆಂಗಳೂರಿನ ಐಇಇಇ ಸಿಗ್ನಲ್ ಪ್ರೊಸೆಸಿಂಗ್ ಸೊಸೈಟಿಯ ಸಹಯೋಗದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನ.14 ರಿಂದ ಐದು ದಿನಗಳ ಕಾಲ ಸಿಗ್ನಲ್ ಪ್ರೊಸೆಸಿಂಗ್ ಫಾರ್ ಬಯೋಮೆಡಿಕಲ್ ಎಪ್ಲಿಕೇಶನ್ಸ್ ಎಂಬ ವಿ‍ಷಯದ ಕುರಿತು ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರವನ್ನು ನ.14 ರಂದು ಹರ್ಮನ್ ಇಂಟರ್‌ ನ್ಯಾಶನಲ್ ಸಂಸ್ಥೆಯ ಅಟೊಮೊಟಿವ್ ಆಡಿಯೋ ಸಾಫ್ಟ್ ವೇರ್ ವಿಭಾಗದ ನಿರ್ದೇಶಕ ಹಾಗೂ ಐಇಇಇ ಸಿಗ್ನಲ್ ಪ್ರೊಸೆಸಿಂಗ್ ಸೊಸೈಟಿ ಬೆಂಗಳೂರು ಚಾಪ್ಟರ್‌ನ ಮುಖ್ಯಸ್ಥ ಶೈಲೇಶ್ ಸಕ್ರಿ ಉದ್ಘಾಟಿಸಲಿರುವರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಐಇಇಇ ಸಿಗ್ನಲ್ ಪ್ರೊಸೆಸಿಂಗ್ ಸೊಸೈಟಿ, ಬೆಂಗಳೂರು ಚಾಪ್ಟರ್‌ನ ವೈಸ್ ಚೇರ್ಮನ್ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಸಚಿವೆ ಡಾ. ರೇಖಾ ಭಂಡಾರ್ಕರ್ ಕಾರ್ಯಕ್ರಮವನ್ನು ಸಂಯೋಜಿಸಲಿರುವರು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗದ ಸಿಗ್ನಲ್ ಪ್ರೊಸೆಸಿಂಗ್ ತಜ್ಞರಿಂದ ವಿವಿಧ ವಿಷಯಗಳ ಬಗೆಗೆ ದಿಕ್ಸೂಚಿ ಭಾಷಣಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!