Thursday, December 1, 2022
spot_img
Homeಸುದ್ದಿನ.24 : ಕಾರ್ಕಳದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ

ನ.24 : ಕಾರ್ಕಳದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ

ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ಸುಂದರ ಪುರಾಣಿಕ ಸ್ಮಾರಕ ಸಂಯುಕ್ತ ಪೌಢಶಾಲೆ ಪೆರ್ವಾಜೆ ಇದರ ಜಂಟಿ ಆಶ್ರಯದಲ್ಲಿ ಕಾರ್ಕಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ನ.24 ರಂದು ಪೆರ್ವಾಜೆ ಪ್ರೌಢ ಶಾಲೆಯಲ್ಲಿ ಬೆಳಿಗ್ಗೆ 9:30 ರಿಂದ ನಡೆಯಲಿದೆ. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಕವಿಗೋಷ್ಟಿ, ನಾನು ಮೆಚ್ಚಿದ ಪುಸ್ತಕ ಮತ್ತು ಕಾರ್ಕಳ ತಾಲೂಕಿನ ನನ್ನ ನೆಚ್ಚಿನ ಸಾಹಿತಿ ಎಂಬ ಮೂರು ವಿಚಾರಗಳಲ್ಲಿ ಸಮ್ಮೇಳನ ನಡೆಯಲಿದೆ. ಭಾಗವಹಿಸುವ ಹಾಗೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳ ವಿವರವನ್ನು ನ.14 ರೊಳಗೆ 9880644905 (ಹರ್ಷಿಣಿ ಕೆ.) ಅಥವಾ 9481214438 (ಗಣೇಶ್‌ ಜಾಲ್ಸೂರು) ವಾಟ್ಸ್ಯಾಪ್‌ ನಂಬರಿಗೆ ಕಳುಹಿಸಿಕೊಡಬೇಕಾಗಿ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!