Thursday, December 1, 2022
spot_img
Homeಸುದ್ದಿಕಾರ್ಕಳ: ತಾಲೂಕು ಕಚೇರಿಯಲ್ಲಿ ಕನಕ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿ ಆಚರಣೆ

ಕಾರ್ಕಳ: ತಾಲೂಕು ಕಚೇರಿಯಲ್ಲಿ ಕನಕ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿ ಆಚರಣೆ

ಕಾರ್ಕಳ: ದಾಸ ಸಾಹಿತ್ಯದ ಮೂಲಕ ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿ ಸಾಮಾಜಿಕ ಪಿಡುಗುಗಳ ವಿರುದ್ದ ಕ್ರಾಂತಿಯನ್ನು ಮಾಡಿದ ಸಂತ ಕನಕದಾಸ ಮತ್ತು ಚಿತ್ರದುರ್ಗದ ಕೋಟೆಯ ರಕ್ಷಣೆಗಾಗಿ ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರ ವನಿತೆ ಒನಕೆ ಓಬವ್ವ, ಈ ಎರಡೂ ಮಹಾನ್‌ ವ್ಯಕ್ತಿಗಳ ಜನ್ಮ ದಿನಾಚರಣೆಯನ್ನು ಸರ್ಕಾರದ ಆದೇಶದಂತೆ ನ.11 ರಂದು ಆಚರಿಸಲಾಗುತ್ತದೆ.

ಇಂದು ಕಾರ್ಕಳದ ತಾಲೂಕು ಕಚೇರಿಯಲ್ಲಿ ಕನಕ ದಾಸರು ಮತ್ತು ಓನಕೆ ಓಬವ್ವರ ಜಯಂತಿಯನ್ನು ದೀಪ ಬೆಳಗಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್ ಎಸ್.‌, ಕಂದಾಯ ನಿರೀಕ್ಷಕ ಶಿವಪ್ರಸಾದ್‌, ಪ್ರಥಮ ದರ್ಜೆ ಸಹಾಯಕ ಮಹೇಶ್‌ ಕುಮಾರ್‌, ದ್ವಿತೀಯ ದರ್ಜೆ ಸಹಾಯಕರಾದ ರಕ್ಷಿತ್‌ ಕುಮಾರ್‌, ನವೀನ್‌ ಕುಮಾರ್‌, ಶ್ರೀನಾಥ್‌ ಎಸ್.‌, ಮತ್ತು ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!