Saturday, December 10, 2022
spot_img
Homeಸುದ್ದಿಹೆಬ್ರಿ : ವಾಲ್ಮೀಕಿ ಆಶ್ರಮದ ಶಾಲಾವರಣದಲ್ಲಿ ಅಗ್ನಿ ಅವಘಡ

ಹೆಬ್ರಿ : ವಾಲ್ಮೀಕಿ ಆಶ್ರಮದ ಶಾಲಾವರಣದಲ್ಲಿ ಅಗ್ನಿ ಅವಘಡ

ಹೆಬ್ರಿ: ಅಗ್ನಿ ಅವಘಡದಿಂಧಾಗಿ ನಾಲ್ವರು ವಿದ್ಯಾರ್ಥಿಗಳು ತೀವ್ರ ಗಾಯಗೊಂಡ ಘಟನೆ ಹೆಬ್ರಿಯ ವಾಲ್ಮೀಕಿ ಆಶ್ರಮದಲ್ಲಿ ನ.9ರ ಸಂಜೆ ನಡೆದಿದೆ. ಹಾಸ್ಟೆಲ್‌ನ ಹಿಂಭಾಗದಲ್ಲಿ ಕಸ ಕಡ್ಡಿಗಳಿಗೆ ಬೆಂಕಿ ಹಚ್ಚುವ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀನಿವಾಸ್, ಅಮರೇಶ್ ಹಾಗೂ ಐದನೇ ತರಗತಿಯ ವಿನೋದ್ ಮತ್ತು ಮನೋಜ್ ಗಾಯಗೊಂಡವರು. ಈ ಘಟನೆಗೆ ಹಾಸ್ಟೇಲ್ ಅಡುಗೆ ಕೆಲಸದ ಸಾವಿತ್ರಿ ಮತ್ತು ವಾರ್ಡನ್ ನಾಗಶ್ರೀಯವರ ನಿರ್ಲಕ್ಷತನವೆ ಕಾರಣ ಎಂದು ಶ್ರೀನಿವಾಸ್‌ ಅವರ ತಾಯಿ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಾಯಾಳುಗಳ ಪೈಕಿ ಮೂವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಓರ್ವ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಬ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುರುವಾರ ಸಂಜೆ ಹೆಬ್ರಿ ಗ್ರಾ. ಪಂ. ಅಧ್ಯಕ್ಷೆ ಮಾಲತಿ ಹಾಗೂ ಸದಸ್ಯರು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!