Tuesday, December 6, 2022
spot_img
Homeಕ್ರೈಂಬೆಳಗಾವಿ ಖಾಕಿ ಪಡೆ ಕಾರ್ಯಚರಣೆ : ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಬೆಳಗಾವಿ ಖಾಕಿ ಪಡೆ ಕಾರ್ಯಚರಣೆ : ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಬೆಳಗಾವಿ : ಧಾರವಾಡ ಹಾಗೂ ಬೆಳಗಾವಿ ಸೇರಿದಂತೆ 22 ಮನೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಕುಖ್ಯಾತ ಅಂತರಾಜ್ಯ ಕಳ್ಳರಿಬ್ಬರನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರರಿಂದ 75ಲಕ್ಷ ಮೌಲ್ಯದ 1.5ಕೆಜಿ ಚಿನ್ನಾಭರಣ, 3ಲಕ್ಷ ಮೌಲ್ಯದ 4ಕೆಜಿ ಬೆಳ್ಳಿ ಮತ್ತು ಕಳ್ಳತನ ಗೈಯ್ಯಲು ಬಳಸಿದ್ದ 1.80ಲಕ್ಷ ಮೌಲ್ಯದ 1 ವಾಹನವನ್ನು ಜಪ್ತಿ ಮಾಡಲಾಗಿದೆ. ಮಹಾರಾಷ್ಟ್ರದ ನಿವಾಸಿ ಮಹೇಶ ಕಾಳಗಿನಕೊಪ್ಪ ಮತ್ತು ಗೋವಾ ನಿವಾಸಿ ಪ್ರಕಾಶ ಪಾಟೀಲ್‌ ಬಂಧಿತರು. ಹಿರಿಯ ಪೊಲೀಸ್‌ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಅಪರಾಧ ಮತ್ತು ಸಂಚಾರ ಡಿಸಿಪಿ ಪಿ.ವಿ.ಸ್ನೇಹಾ ಅವರ ನೇತೃತ್ವದಲ್ಲಿ ಎಸಿಪಿಗಳಾದ ನಾರಾಯಣ ಭರಮನಿ, ಚಂದ್ರಪ್ಪ, ಸಿಸಿಬಿ ಘಟಕದ ಸಿಪಿಐ ನಿಂಗನಗೌಡ ಪಾಟೀಲ್‌, ಕ್ಯಾಂಪ್‌ ಸಿಪಿಐ ಪ್ರಭಾಕರ್‌ ಧರ್ಮಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!