10 ವರ್ಷಗಳಿಗೊಮ್ಮೆ ಆಧಾರ್‌ ನವೀಕರಣ

ಕೇಂದ್ರ ಸರಕಾರದಿಂದ ಹೊಸ ನಿಯಮ ಜಾರಿ

ಹೊಸದಿಲ್ಲಿ : ಕೇಂದ್ರ ಸರ್ಕಾರ ಆಧಾರ್ ನಿಯಮಗಳಿಗೆ ತಿದ್ದುಪಡಿ ಮಾಡಿದ್ದು, ಆಧಾರ್ ಹೊಂದಿರುವವರು 10 ವರ್ಷದ ಬಳಿಕ ಅದರ ದಾಖಲೆಗಳನ್ನು ಕನಿಷ್ಠ ಒಮ್ಮೆಯಾದರೂ ನವೀಕರಿಸಬೇಕು ಎಂದು ಹೇಳಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ದಾಖಲೆಗಳ ನವೀಕರಣ ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿಯಲ್ಲಿ (ಸಿಐಡಿಆರ್) ಆಧಾರ್-ಸಂಬಂಧಿತ ಮಾಹಿತಿಯ ನಿಖರತೆಯನ್ನು ಖಚಿತಪಡಿಸುತ್ತದೆ.
ಆಧಾರ್ ಸಂಖ್ಯೆ ಹೊಂದಿರುವವರು, ಆಧಾರ್‌ಗಾಗಿ ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷಗಳಿಗೊಮ್ಮೆ ಗುರುತಿನ ಪುರಾವೆ(ಪಿಒಐ) ಮತ್ತು ವಿಳಾಸದ ಪುರಾವೆ(ಪಿಒಎ) ದಾಖಲೆಗಳನ್ನು ಸಲ್ಲಿಸುವ ಮೂಲಕ ನವೀಕರಿಸಬೇಕು. ಇದರಿಂದ CIDRನಲ್ಲಿ ಅವರ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅದು ಹೇಳಿದೆ.













































error: Content is protected !!
Scroll to Top