Thursday, December 1, 2022
spot_img
Homeಸುದ್ದಿಮಾಲ್ದೀವ್ಸ್‌ನಲ್ಲಿ ಭೀಕರ ಅಗ್ನಿ ಅವಘಡ : 9 ಭಾರತೀಯರು ಸೇರಿ 10 ಸಾವು

ಮಾಲ್ದೀವ್ಸ್‌ನಲ್ಲಿ ಭೀಕರ ಅಗ್ನಿ ಅವಘಡ : 9 ಭಾರತೀಯರು ಸೇರಿ 10 ಸಾವು


ಮಾಲೆ: ಮಾಲ್ದೀವ್ಸ್‌ನ ರಾಜಧಾನಿ ಮಾಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 9 ಭಾರತೀಯರು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ.
ವಿದೇಶಿ ಕಾರ್ಮಿಕರು ವಾಸವಾಗಿರುವ ಇಕ್ಕಟ್ಟಾದ ವಸತಿ ಗೃಹದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನೆಲ ಮಹಡಿಯಲ್ಲಿದ್ದ ವಾಹನ ದುರಸ್ತಿ ಗ್ಯಾರೇಜಿಗೆ ಬೆಂಕಿ ಹತ್ತಿಕೊಂಡು ಮೇಲಿರುವ ವಸತಿ ಗೃಹಕ್ಕೆ ವ್ಯಾಪಿಸಿದೆ. ಘಟನಾ ಸ್ಥಳದಲ್ಲಿ 10 ದೇಹಗಳು ಸಿಕ್ಕಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೃತಪಟ್ಟಿರುವ 10 ಮಂದಿಯ ಪೈಕಿ 9 ಮಂದಿ ಭಾರತೀಯರು ಹಾಗೂ ಓರ್ವ ಬಾಂಗ್ಲಾದೇಶದ ಪ್ರಜೆ.
ಘಟನೆಗೆ ಮಾಲ್ದೀವ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮಾಲೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಘಟನೆಯಿಂದ ಭಾರತೀಯ ಪ್ರಜೆಗಳು ಸೇರಿದಂತೆ ಜೀವಹಾನಿಗಳು ಸಂಭವಿಸಿವೆ. ಘಟನೆ ತೀವ್ರ ದುಃಖವನ್ನುಂಟು ಮಾಡಿದೆ. ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತೇವೆಂದು ಟ್ವೀಟ್‌ ಮಾಡಿ ಹೇಳಿದೆ.

LEAVE A REPLY

Please enter your comment!
Please enter your name here

Most Popular

error: Content is protected !!