Saturday, December 10, 2022
spot_img
Homeಸ್ಥಳೀಯ ಸುದ್ದಿಮಾಳ (ನ.11) : ಶ್ರೀ ಕ್ಷೇತ್ರ ಉಬರಾಲು ಆದಿ ಆಲಡೆಯ ಜೀರ್ಣೊದ್ಧಾರ ಸಮಿತಿಯ ಆಮಂತ್ರಣ ಪತ್ರಿಕೆ...

ಮಾಳ (ನ.11) : ಶ್ರೀ ಕ್ಷೇತ್ರ ಉಬರಾಲು ಆದಿ ಆಲಡೆಯ ಜೀರ್ಣೊದ್ಧಾರ ಸಮಿತಿಯ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ: ಮಾಳ ಚೌಕಿಯ ಶ್ರೀ ಕ್ಷೇತ್ರ ಉಬರಾಲುವಿನಲ್ಲಿರುವ ಹಲವಾರು ವರ್ಷಗಳ ಇತಿಹಾಸವಿರುವ ಆದಿ ಆಲಡೆ, ಮೂಲ ನಾಗ, ದೇವರ ಸಾನಿಧ್ಯವು ಅಜೀರ್ಣ ಸ್ಥಿತಿಯಲ್ಲಿದ್ದು ಪೂಜೆ ಪುರಸ್ಕಾರಗಳಿಲ್ಲದೆ 30 ವರ್ಷಗಳು ಕಳೆದಿದೆ. ಇದು ಮಾಳ ಗ್ರಾಮ ಮಾತ್ರವಲ್ಲದೆ ಪರವೂರ ಗ್ರಾಮದ ಭಕ್ತಾದಿಗಳ ಆಲಡೆ ಕ್ಷೇತ್ರವೂ ಆಗಿದೆ. ಭಕ್ತಾದಿಗಳೆಲ್ಲರೂ ಸೇರಿ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲು ನಿರ್ಧರಿಸಿದ್ದಾರೆ. ಡಿ.4 ರಂದು ಬೆಳಿಗ್ಗೆ 9 ಗಂಟೆಗೆ ಜೀರ್ಣೋದ್ಧಾರ ಸಮಿತಿ ರಚನೆ ಮತ್ತು ಮುಂದಿನ ಕಾರ್ಯಕ್ರಮಗಳಿಗಾಗಿ ಸಾರ್ವಜನಿಕರ ಸಭೆ ನಡೆಯಲಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಸಮಲೋಚನಾ ಸಭೆಯಲ್ಲಿ ಆಮಂತ್ರಣ ಪತ್ರಿಕೆಯು ನ.11 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಬ್ರಹ್ಮಲಿಂಗೇಶ್ವರ ಶ್ರೀ ವೀರಭದ್ರ ಶ್ರೀ ವೀರಮಾರುತಿ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!