Saturday, December 10, 2022
spot_img
Homeಸಿನೆಮಾಕಾಂತಾರ ಇನ್ನೊಂದು ದಾಖಲೆ

ಕಾಂತಾರ ಇನ್ನೊಂದು ದಾಖಲೆ

ಕರ್ನಾಟಕದಲ್ಲಿ 1 ಕೋಟಿಗೂ ಅಧಿಕ ಟಿಕೆಟ್‌ ಮಾರಾಟ

ಬೆಂಗಳೂರು : ಕಾಂತಾರ ಸಿನೆಮಾ ಹಲವು ಮೈಲಿಗಲ್ಲುಗಳನ್ನು ಸೃಷ್ಟಿ ಮಾಡಿದೆ. ಇದೀಗ ಕರ್ನಾಟಕದಲ್ಲಿ ಕಾಂತಾರ ಚಿತ್ರದ ಒಂದು ಕೋಟಿ ಟಿಕೆಟ್​ಗಳು ಮಾರಾಟ ಆಗಿವೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ ಮೂಲಕ ನಿರ್ಮಾಣವಾದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಎಂಬ ಖ್ಯಾತಿಗೆ ಕಾಂತಾರ ಚಿತ್ರ ಪಾತ್ರವಾಗಿತ್ತು. ಈಗ ಇನ್ನೊಂದು ದಾಖಲೆ ಈ ಸಿನಿಮಾದಿಂದ ಆಗಿದೆ. ಕರುನಾಡಿನಲ್ಲಿ ‘ಕಾಂತಾರ’ ಚಿತ್ರದ ಬರೋಬ್ಬರಿ ಒಂದು ಕೋಟಿ ಟಿಕೆಟ್​ಗಳು ಈವರೆಗೆ ಮಾರಾಟ ಆಗಿವೆ. ಈ ಕುರಿತು ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ಹೇಳಿಕೊಂಡಿದೆ.
ಸೆ.30ರಂದು ತೆರೆಗೆ ಬಂದ ಕಾಂತಾರಕ್ಕೆ ಬಾಯಿ ಮಾತಿನ ಪ್ರಚಾರ ಜೋರಾಗಿ ಸಿಕ್ಕಿದೆ. ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲಿ ಒಳ್ಳೆಯ ರೇಟಿಂಗ್ ಸಿಕ್ಕಿತು. ಸಿನಿಮಾ ನೋಡಿದ ಪ್ರೇಕ್ಷಕರು ಭರಪೂರ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ದಿನ ಕಳೆದಂತೆ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಾ ಹೋಯಿತು. ಸಿನೆಮಾವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಮಾಡಲಾಯಿತು. ಹಾಗಾಗಿ, ಹೊರರಾಜ್ಯಗಳಲ್ಲೂ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ.
ಎಲ್ಲ ಭಾಷೆಗಳಿಂದ ಸೇರಿ ಚಿತ್ರದ ಗಳಿಕೆ 300 ಕೋಟಿ ರೂ.ಗೂ ಅಧಿಕ ಆಗಿದೆ. ಕನ್ನಡ ಸಿನಿಮಾ ಈ ಪರಿ ಸಾಧನೆ ಮಾಡಿರುವುದಕ್ಕೆ ಇಡೀ ಸ್ಯಾಂಡಲ್​ವುಡ್​ ಹೆಮ್ಮೆ ಪಡುತ್ತಿದೆ. ಪ್ರಭಾಸ್​, ಅನುಷ್ಕಾ ಶೆಟ್ಟಿ, ರಜನಿಕಾಂತ್, ವಿವೇಕ್​ ಅಗ್ನಿಹೋತ್ರಿ, ಕಂಗನಾ ರಣಾವತ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!