Thursday, December 1, 2022
spot_img
Homeಸುದ್ದಿ79 ವರ್ಷದ ವೃದ್ಧನಿಗೂ ಹನಿಟ್ರ್ಯಾಪ್‌ ಜಾಲ

79 ವರ್ಷದ ವೃದ್ಧನಿಗೂ ಹನಿಟ್ರ್ಯಾಪ್‌ ಜಾಲ

ಮನೆಗೆ ಕರೆಸಿ ವೀಡಿಯೊ ಮಾಡಿದ್ದ ಮಹಿಳೆಯ ಬಂಧನ

ದಾವಣಗೆರೆ: ವೃದ್ಧರನ್ನೂ ಹನಿಟ್ರ್ಯಾಪ್‌ ಜಾಲ ಬಿಡುತ್ತಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ 79 ವರ್ಷದ ವ್ರದ್ಧರೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಕೆಡವಿ 15 ಲಕ್ಷ ರೂಪಾಯಿ ಸುಲಿಗೆಗೆ ಯತ್ನಿಸಿದ ಆರೋಪದ ಮೇಲೆ 32 ವರ್ಷದ ವಿವಾಹಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಸರಸ್ವತಿನಗರದ ನಿವಾಸಿ ಯಶೋದಾ ಎಂದು ಗುರುತಿಸಲಾಗಿದೆ. 79 ವರ್ಷದ ಚಿದಾನಂದಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿದಾನಂದಪ್ಪಗೆ ಪರಿಚಯವಾದ ಮಹಿಳೆ ಅವರೊಂದಿಗೆ ಸ್ನೇಹ ಬೆಳೆಸಿದ್ದಳು. 86 ಸಾವಿರ ರೂ. ಕೈ ಸಾಲ ಪಡೆದು ಹೆಚ್ಚಿನ ಹಣ ಕೇಳುತ್ತಿದ್ದಳು. ಚಿದಾನಂದಪ್ಪ ಹಣ ಮರಳಿ ಕೇಳಿದಾಗ ಯಶೋದಾ ಆತನನ್ನು ತನ್ನ ಮನೆಗೆ ಕರೆದು ಡ್ರಗ್ಸ್ ಮಿಶ್ರಿತ ಜ್ಯೂಸ್ ನೀಡಿದ್ದಾಳೆ. ಅದನ್ನು ಸೇವಿಸಿ ಪ್ರಜ್ಞಾಹೀನರಾಗುತ್ತಿದ್ದಂತೆ, ಬಟ್ಟೆ ಬಿಚ್ಚಿ ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದಾಳೆ. ನಂತರ 15 ಲಕ್ಷ ರೂ.ಗೆ ಬೇಡಿಕೆಯಿಟ್ಟು, ಕೊಡದಿದ್ದರೆ ವಿಡಿಯೋವನ್ನು ಹೆಂಡತಿ ಮತ್ತು ಮಕ್ಕಳಿಗೆ ತೋರಿಸುವುದಾಗಿ ಬೆದರಿಕೆ ಹಾಕಿದ್ದಾಳೆ.

LEAVE A REPLY

Please enter your comment!
Please enter your name here

Most Popular

error: Content is protected !!