Thursday, December 1, 2022
spot_img
Homeಸುದ್ದಿಎಂ.ಪಿ.ಎಂನಲ್ಲಿ ಯಕ್ಷಗಾನ ಸಂಘ, ಸರ್ಟಿಫಿಕೆಟ್ ಕೋರ್ಸ್ ಉದ್ಘಾಟನೆ

ಎಂ.ಪಿ.ಎಂನಲ್ಲಿ ಯಕ್ಷಗಾನ ಸಂಘ, ಸರ್ಟಿಫಿಕೆಟ್ ಕೋರ್ಸ್ ಉದ್ಘಾಟನೆ

ಕಾರ್ಕಳ: ಕಾರ್ಕಳ ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2022-2023ನೇ ಸಾಲಿನ ಯಕ್ಷಗಾನ ಸಂಘ ಹಾಗೂ ಯಕ್ಷಗಾನ ಸರ್ಟಿಫಿಕೆಟ್ ಕೋರ್ಸ್‌ ಉದ್ಘಾಟನೆ ಬುಧವಾರ ಕಾಲೇಜು ಆವರಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಹಾವೀರ ಪಾಂಡೆ ಮಾತನಾಡಿ ಯಕ್ಷಗಾನ ಸಾಂಪ್ರದಾಯಿಕ ಕಲೆ ಮಾತ್ರವಲ್ಲದೆ ದೇವರ ಆರಾಧನೆಯೂ ಆಗಿದೆ ಎಂದರು.
ಇನ್ನೋರ್ವ ಅತಿಥಿ ಜ್ಯೋತಿ ಶೆಟ್ಟಿ ಯಕ್ಷಗಾನ ಹಾಗೂ ತಾಳಮದ್ದಳೆಯ ಮಹತ್ವದ ವಿವರಣೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕಿರಣ್ ಎಂ. ಬಾಲ್ಯದ ಯಕ್ಷಗಾನದ ಅನುಭವವನ್ನು ಹಂಚಿಕೊಂಡರು. ಹಳ್ಳಿಯಿಂದ ದಿಲ್ಲಿಯವರಿಗೆ ಯಕ್ಷಗಾನದ ಮೆರೆಯುತ್ತಿದೆ ಎಂದರು. ಯಕ್ಷಗಾನ ವಿದ್ಯಾರ್ಥಿ ಅನ್ವಿತ ಶರ್ಮಾ ಯಕ್ಷಗಾನದ ತಮ್ಮ ಅನುಭವವನ್ನು ತಿಳಿಸಿದರು
ವಿದ್ಯಾರ್ಥಿಗಳು ಹಾಗೂ ಅದ್ಯಾಪಕ ವೃಂದದವರು ಉಪಸ್ಥಿತರಿದ್ದರು. ಗಣೇಶ್‌ ಸ್ವಾಗತಿಸಿ, ಸಾತ್ವಿಕ್ ವಂದಿಸಿದರು. ಶ್ರಾವ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!