ನೂತನ ಅಧ್ಯಕ್ಷರಾಗಿ ಅಬ್ಬನಡ್ಕ ಸತೀಶ್ ಪೂಜಾರಿ ಅವಿರೋಧ ಆಯ್ಕೆ
ಕಾರ್ಕಳ : ಬೆಳ್ಮಣ್ ಜೇಸಿಐ ಘಟಕದ 43ನೇ ವರ್ಷದ ಪದಗ್ರಹಣ ಸಮಾರಂಭವು ನ.12 ರಂದು ರಾತ್ರಿ 7 ಗಂಟೆಗೆ ಬೆಳ್ಮಣ್ಣು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮೀನಾಗಾರಿಕಾ ನಿಗಮ ಮಂಡಳಿಯ ನಿರ್ದೇಶಕಿ ಕಟಪಾಡಿ ಗೀತಾಂಜಲಿ ಸುವರ್ಣ, ಮೈಸೂರು ಎಸ್.ಐ.ಆರ್.ಡಿ ಘಟಕದ ತರಬೇತು ಸಂಯೋಜಕಿ ಸುಧಾಮಣಿ, ಜೇಸಿಐ ವಲಯ 15ರ ನಿಯೋಜಿತ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಭಾಗವಹಿಸಲಿದ್ದಾರೆ. ಜೇಸಿಐ ಪೂರ್ವ ವಲಯಾಧ್ಯಕ್ಷ, ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ. ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ಸಂಭ್ರಮ ಕಾರ್ಯಕ್ರಮ ಜರುಗಲಿದೆ ಎಂದು ಬೆಳ್ಮಣ್ಣು ಜೇಸಿಐ ಘಟಕದ ಪ್ರಸಕ್ತ ವರ್ಷದ ಅಧ್ಯಕ್ಷ ವೀಣೇಶ್ ಅಮೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಬ್ಬನಡ್ಕ ಸತೀಶ್ ಪೂಜಾರಿ ಅವಿರೋಧವಾಗಿ ಆಯ್ಕೆ
ಬೆಳ್ಮಣ್ ಜೇಸಿಐ ಘಟಕದ 43ನೇ ವರ್ಷದ ನೂತನ ಅಧ್ಯಕ್ಷರಾಗಿ ಅಬ್ಬನಡ್ಕ ಸತೀಶ್ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ವಿಂಶತಿ ವರ್ಷದ ಅಧ್ಯಕ್ಷರಾಗಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಇಟ್ಟಮೇರಿ ಲಿಟ್ಲ್ ಫ್ಲವರ್ ಫ್ರೆಂಡ್ಸ್‌ನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸದಸ್ಯರಾಗಿ ಮತ್ತು ಮತ್ತಿತರ ಸಂಘ -ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಘಟಕದ ನೂತನ ಪದಾಧಿಕಾರಿಗಳು:
ನಿಕಟ ಪೂರ್ವಾಧ್ಯಕ್ಷ – ವೀಣೇಶ್ ಅಮೀನ್
ಉಪಾಧ್ಯಕ್ಷರುಗಳು – ದೀಕ್ಷಿತ್ ದೇವಾಡಿಗ (ಘಟಕ), ಜಯಶ್ರೀ ಪ್ರಕಾಶ್ ಪೂಜಾರಿ (ತರಬೇತಿ), ಅವಿನಾಶ್ ಪೂಜಾರಿ (ಕಾರ್ಯಕ್ರಮ), ಅಶ್ವಥ್ ಶೆಟ್ಟಿ (ಸಮುದಾಯ ಅಭಿವೃದ್ಧಿ), ಅಮಿತಾ ರವಿರಾಜ್ ಶೆಟ್ಟಿ (ವ್ಯವಹಾರ)
ಕಾರ್ಯದರ್ಶಿ – ಸರಿತಾ ದಿನೇಶ್ ಸುವರ್ಣ
ಜೊತೆ ಕಾರ್ಯದರ್ಶಿ – ಹರಿಪ್ರಸಾದ್ ನಂದಳಿಕೆ
ಕೋಶಾಧಿಕಾರಿ – ಲಿತಿಶಿಯಾ
ನಿದೇರ್ಶಕರುಗಳು – ರಾಜೇಶ್ ಕುಲಾಲ್, ಸುಧೀರ್ ಕಾಮತ್, ಡೆನ್ಜಿಲ್ ಪೆರ್ನಾಂಡೀಸ್, ಜೆಸಿಂತಾ ಡಿಸೋಜಾ, ಅನ್ನಪೂರ್ಣ ಕಾಮತ್
ಯುವ ಜೇಸಿ ಅಧ್ಯಕ್ಷ – ಕೀರ್ತನ್ ಪೂಜಾರಿ
ಯುವ ಜೇಸಿ ನಿದೇರ್ಶಕ – ವೈಶಾಖ್ ಹೆಬ್ಬಾರ್
ಲೇಡಿ ಜೇಸಿ ನಿದೇರ್ಶಕಿ – ಸೌಜನ್ಯ ಸತೀಶ್ ಕೋಟ್ಯಾನ್
ವಿಕಾಸ ಗೃಹ ಪತ್ರಿಕೆ ಸಂಪಾದಕ – ಸತ್ಯನಾರಾಯಣ ಭಟ್