Thursday, December 1, 2022
spot_img
Homeರಾಜ್ಯನೆಹರು ತನ್ನನ್ನು ಹಿಂದೂ ಎಂದು ಕರೆಯದಂತೆ ಹೇಳಿದ್ದರು : ಕಾಂಗ್ರೆಸ್ಸಿನಲ್ಲಿ ಅದೇ ಪರಂಪರೆ ಮುಂದುವರೆದಿದೆ -...

ನೆಹರು ತನ್ನನ್ನು ಹಿಂದೂ ಎಂದು ಕರೆಯದಂತೆ ಹೇಳಿದ್ದರು : ಕಾಂಗ್ರೆಸ್ಸಿನಲ್ಲಿ ಅದೇ ಪರಂಪರೆ ಮುಂದುವರೆದಿದೆ – ಸಚಿವ ಸುನೀಲ್ ಕುಮಾರ್

ಉಡುಪಿ : ಕನ್ನಡ ಸಂಸ್ಕೃತಿ ಸಚಿವರಾಗಿದ್ದ ಬಿ. ಟಿ. ಲಲಿತಾ ನಾಯಕ್ ದೈವಾರಾಧಕರಿಗೆ ಮಾಸಾಶನ ವಿರೋಧಿಸಿದ್ದರು. ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳಬೇಡಿ ಎನ್ನುತ್ತಾರೆ. ಇದು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ ಎಂದು ಸಚಿವ ಸುನೀಲ್ ಕುಮಾರ್ ಮಾರ್ಮಿಕವಾಗಿ ಹೇಳಿದರು. ದೇಗುಲ ನಗರದಲ್ಲಿ ಸ್ವಾಭಿಮಾನಿ ಹಿಂದೂ ಅಭಿಯಾನ ಇಂದಿನಿಂದ ಆರಂಭವಾಗಿದೆ. ಕಾಂಗ್ರೆಸ್ ಹುಟ್ಟಿನಿಂದ ಇವತ್ತಿನವರೆಗೆ ಹಿಂದು ಭಾರತೀಯತೆ ಮೇಲೆ ಹಲವು ಬಾರಿ ಅವಮಾನ ಮಾಡಿದೆ. ನೆಹರು ನನ್ನನ್ನು ಹಿಂದೂ ಎಂದು ಕರೆಯಬೇಡಿ ಎಂದು ಹೇಳಿದ್ದರು. ನೆಹರು ಹಾಕಿಕೊಟ್ಟ ಪರಂಪರೆ ಇವತ್ತಿಗೂ ಮುಂದುವರೆಯುತ್ತಾ ಬಂದಿದೆ. ಅವಕಾಶ ಸಿಕ್ಕಾಗಲೆಲ್ಲ ಹಿಂದುತ್ವ ಮತ್ತು ಭಾರತೀಯತೆ ಬಗ್ಗೆ ಕಾಂಗ್ರೆಸ್ ಅಪಮಾನ ಮಾಡುತ್ತಾ ಬಂದಿದೆ. ಕಾಂಗ್ರೆಸ್ ಹಿರಿಯ ನಾಯಕ ಶಿವರಾಜ್ ಪಾಟೀಲ್ ಭಗವದ್ಗೀತೆಯನ್ನು ಜಿಹಾದ್ ಗೆ ಹೋಲಿಸಿದ್ದರು. ಸಿದ್ದರಾಮಯ್ಯನವರಿಗೆ ತಿಲಕ ಕಂಡರೆ ಆಗುವುದಿಲ್ಲ ಎಂದು ಅವರೇ ಹೇಳಿದ್ದಾರೆ. ಸಾವರ್ಕರ್ ಬಗೆಗೂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ಸಿಗೆ ಹಿಂದೂಗಳನ್ನು ಕಂಡರೆ ಅಸಹನೆ. ಭಾರತೀಯತೆಯನ್ನು ಕಾಂಗ್ರೆಸ್ ಯಾವತ್ತೂ ಒಪ್ಪಿಲ್ಲ ಎಂದು ಹೇಳಿದರು.

ಹಿಂದುತ್ವಕ್ಕೆ ಧಕ್ಕೆಯಾದಾಗಲೆಲ್ಲ ನಾವು ಎದ್ದು ನಿಂತಿದ್ದೇವೆ. ಈ ವಿಚಾರವನ್ನು ನಾವು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಈ ಹೇಳಿಕೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಭಾರತೀಯತೆ ಹಿಂದೂ ಜೀವನ ಪದ್ಧತಿಯನ್ನು ಒಪ್ಪದ ಕಾಂಗ್ರೆಸ್ ಸಮಾಜದ ಕ್ಷಮೆ ಕೇಳಬೇಕು. ಜಾರಕಿಹೊಳಿ ಶಾಲೆಗೆ ಸೇರುವಾಗ, ಚುನಾವಣೆಗೆ ಸ್ಪರ್ಧಿಸುವಾಗ ಹಿಂದೂ ಪರಿಶಿಷ್ಟ ಜಾತಿ ಎಂದು ಹೇಳಿದ್ದಿರೋ ಅಥವಾ ಅಶ್ಲೀಲ ಹಿಂದೂ ಎಂದು ಹೇಳಿ ಶಾಲೆಗೆ ಸೇರಿದ್ದೀರೋ? ಕಾಂಗ್ರೆಸ್ ಈ ಹೇಳಿಕೆಗೆ ಬಹಳ ದೊಡ್ಡ ಪ್ರಮಾಣದ ಬೆಲೆ ತೆರಬೇಕಾಗುತ್ತದೆ.

LEAVE A REPLY

Please enter your comment!
Please enter your name here

Most Popular

error: Content is protected !!