Saturday, December 10, 2022
spot_img
Homeಸುದ್ದಿಕ್ರಿಯೇಟಿವ್‌ ಕಾಲೇಜಿನಲ್ಲಿ ಕಾನೂನು ಅರಿವು ಮತ್ತು ನಮಗೂ ಹಕ್ಕಿದೆ @75 ಕಾರ್ಯಕ್ರಮ

ಕ್ರಿಯೇಟಿವ್‌ ಕಾಲೇಜಿನಲ್ಲಿ ಕಾನೂನು ಅರಿವು ಮತ್ತು ನಮಗೂ ಹಕ್ಕಿದೆ @75 ಕಾರ್ಯಕ್ರಮ

ಕಾರ್ಕಳ: ನಮ್ಮ ದೇಶದ ಕಾನೂನು ಅತ್ಯಂತ ಪರಿಣಾಮಕಾರಿಯಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ನ್ಯಾಯದ ಹಕ್ಕನ್ನು ನೀಡಿದೆ ಎಂದು ವಕೀಲ ಪ್ರಸನ್ನ ಕುಮಾರ್‌ ಹೇಳಿದರು. ಅವರು ನ.9 ರಂದು ಕ್ರಿಯೇಟಿವ್‌ ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ನಡೆದ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ನಮಗೂ ಹಕ್ಕಿದೆ@75 ಕಾರ್ಯಕ್ರಮದಲ್ಲಿ ಮಾತನಾಡಿ, ಕಾನೂನಿನ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನೂ ತಲೆಬಾಗಿ ತನ್ನ ಸ್ವಾತಂತ್ರ್ಯವನ್ನು ಅನುಭವಿಸಬೇಕು. ಎಲ್ಲರಿಗೂ ಸಮಾನ ನ್ಯಾಯದ ವ್ಯವಸ್ಥೆಯಿದ್ದು ನಮ್ಮ ಹಕ್ಕಿಗಾಗಿ ಹೋರಾಡಿ ನ್ಯಾಯಲಯದಲ್ಲಿ ನ್ಯಾಯ ಪಡೆಯುವ ಅವಕಾಶವು ಇದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಿದ್ವಾನ್‌ ಗಣಪತಿ ಭಟ್‌ ಮಾತನಾಡಿ, ನಾವೆಲ್ಲ ಕಾನೂನು ಮತ್ತು ಸಂವಿಧಾನದ ಆಶಯವನ್ನು ಗೌರವಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಲೇಜಿನ ಸಂಸ್ಥಾಪಕರಾದ ಅಶ್ವಥ್‌ ಎಸ್.‌ ಎಲ್.‌, ಗಣಪತಿಕೆ. ಎಸ್., ಸಾರ್ವಜನಿಕ ಸಂಪರ್ಕ ಅಧಿಕಾರಿ ಲಿಶಾನ್ ಗೌಡ, ಉಪನ್ಯಾಸಕರಾದ ರಾಘವೇಂದ್ರರಾವ್, ಉಮೇಶ್, ಅಕ್ಷತಾ ಜೈನ್, ಚಂದ್ರಕಾಂತ್ ಉಪಸ್ಥಿತರಿದ್ದರು. ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!