Thursday, December 1, 2022
spot_img
Homeಸ್ಥಳೀಯ ಸುದ್ದಿಕಾರ್ಕಳದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಭೆ : 472 ವ್ಯಾಪಾರಸ್ಥರಿಗೆ ಸ್ವ-ನಿಧಿ ಯೋಜನೆ ಸೌಲಭ್ಯ

ಕಾರ್ಕಳದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಭೆ : 472 ವ್ಯಾಪಾರಸ್ಥರಿಗೆ ಸ್ವ-ನಿಧಿ ಯೋಜನೆ ಸೌಲಭ್ಯ

ಕಾರ್ಕಳ : ಬೀದಿ ಬದಿ ವ್ಯಾಪಾರಸ್ಥರ ಜೀವನ ನಿರ್ವಹಣೆಯಲ್ಲಿ ಸ್ವ-ನಿಧಿ ಯೋಜನೆಯ ಪಾತ್ರ ಮಹತ್ತರವಾದುದು ಎಂದು ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌ ಹೇಳಿದರು.
ಅವರು ನ. 9ರಂದು ಪುರಸಭೆ ವತಿಯಿಂದ ರೋಟರಿ ಬಾಲಭವನದಲ್ಲಿ ದೀನ್‌ ದಯಾಳ್ ಅಂತ್ಯೋದಯ ಯೋಜನೆಯಡಿ ಸರಕಾರದ‌ ನಿರ್ದೇಶನದಂತೆ ರಚಿಸಿರುವ ನಿರಂತರ ಉಳಿತಾಯ (ಸ್ವ- ಸಹಾಯ) ಗುಂಪು ಮತ್ತು ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯರಿಗೆ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಮರ್ಥ್ಯಭಿವೃದ್ಧಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೀದಿ ಬದಿ ವ್ಯಾಪಾಸ್ಥರು ನಿಯಮದನ್ವಯ ವ್ಯಾಪಾರ ಮಾಡಲು ಬದ್ಧರಾಗಿರಬೇಕು. ಗುಣಮಟ್ಟ ಕಾಪಾಡುವುದರೊಂದಿಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು. ಬ್ಯಾಂಕಿನಿಂದ ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ಪಾವತಿಸಿ ಹೆಚ್ಚಿನ ಸಾಲ ಸೌಲಭ್ಯ ಪಡೆದು ತಮ್ಮ ವ್ಯವಹಾರ ವೃದ್ಧಿಸಿಕೊಳ್ಳಬೇಕೆಂದು ಸುಮಾ ಕೇಶವ್‌ ಹೇಳಿದರು.
ಜಿಲ್ಲ ಕೌಶಲ್ಯ ಅಭಿವೃದ್ಧಿ ವ್ಯವಸ್ಥೆಯ ಅಭಿಯಾನ ವ್ಯವಸ್ಥಾಪಕ ರಾಮಕೃಷ್ಣ ಮತ್ತು ಗೀತಾ ಸಂಘದ ಸದಸ್ಯರಿಗೆ ದೀನ್‌ ದಯಾಳ್‌ ಅಂತ್ಯೋದಯ ಯೋಜನೆಯ ಕುರಿತು ಮಾಹಿತಿ ನೀಡಿದರು.

ಸ್ವ-ನಿಧಿ ಯೋಜನೆ
ಕೋವಿಡ್‌ ಸಂದರ್ಭದಲ್ಲಿ ಉದ್ಯೋಗವಿಲ್ಲದೇ ಸಂಕಷ್ಟಕ್ಕೀಡಾಗಿದ್ದ ಬೀದಿ ಬದಿ ವ್ಯಾಪಾರಸ್ಥರಿಗೆ ನೆರವಾಗುವ ಸಲುವಾಗಿ ಪ್ರಧಾನ ಮಂತ್ರಿಯವರು ಪಿ.ಎಂ ಸ್ವ ನಿಧಿ ಯೋಜನೆ ಜಾರಿಗೊಳಿಸಿದ್ದರು. ಕಾರ್ಕಳ ತಾಲೂಕಿನಲ್ಲಿ ಒಟ್ಟು 472 ಮಂದಿಗೆ ಈ ಯೋಜನೆಯಡಿ ಸಾಲ ಸೌಲಭ್ಯ ದೊರಕಿತ್ತು.

ಪ್ರಮಾಣ ಪತ್ರ ವಿತರಣೆ
ಪ್ರಧಾನಿ ಮೋದಿ ಅವರು ಬೀದಿ ಬದಿ ವ್ಯಾಪಾರಸ್ಥರಿಗೆ ನೀಡಿರುವ ಪ್ರಮಾಣ ಪತ್ರ ಹಾಗೂ ಪುರಸಭೆಯಿಂದ ನೀಡಲಾದ ಗುರುತು ಪತ್ರವನ್ನು ವ್ಯಾಪಾರಸ್ಥರಿಗೆ ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಪುರಸಭಾ ಸದಸ್ಯೆ ಭಾರತಿ ಅಮೀನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮುದಾಯ ಸಂಘಟನಾ ಅಧಿಕಾರಿ ಈಶ್ವರ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!