Thursday, December 1, 2022
spot_img
Homeಸ್ಥಳೀಯ ಸುದ್ದಿಸತೀಶ್‌ ಜಾರಕಿಹೊಳಿ ಹೇಳಿಕೆ ವಿರುದ್ಧ ಕಾರ್ಕಳದಲ್ಲಿ ಬಿಜೆಪಿ ಪ್ರತಿಭಟನೆ

ಸತೀಶ್‌ ಜಾರಕಿಹೊಳಿ ಹೇಳಿಕೆ ವಿರುದ್ಧ ಕಾರ್ಕಳದಲ್ಲಿ ಬಿಜೆಪಿ ಪ್ರತಿಭಟನೆ

ಜಾರಕಿಹೊಳಿ ಹೇಳಿಕೆ ಕಾಂಗ್ರೆಸ್‌ ಸಂಸ್ಕೃತಿ ಬಿಂಬಿಸುತ್ತದೆ – ನವೀನ್‌ ನಾಯಕ್

ಹಿಂದುತ್ವವೇ ಬಿಜೆಪಿಯ ಜೀವಾಳ- ರವೀಂದ್ರ ಕುಕ್ಕುಂದೂರು

ಹಿಂದು ಜಾಗೃತಿಯಾಗಬೇಕು – ಮಣಿರಾಜ್‌ ಶೆಟ್ಟಿ

ಕಾರ್ಕಳ : ಸತೀಶ್‌ ಜಾರಕಿಹೊಳಿ ಹಿಂದು ಪದ ಅಶ್ಲೀಲ ಎಂದು ಹೇಳಿರುವುದು ಮತ್ತು ಬಿ.ಟಿ. ಲಲಿತಾ ತುಳುನಾಡಿನ ದೈವಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಕಾಂಗ್ರೇಸಿಗರ ಹಿಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ಬಿಜೆಪಿ ಕಾರ್ಯದರ್ಶಿ ನವೀನ್‌ ನಾಯಕ್‌ ಹೇಳಿದರು. ಅವರು ನ. 9 ರಂದು ಕಾರ್ಕಳ ಬಸ್‌ಸ್ಟಾಂಡಿನಲ್ಲಿ ಕಾಂಗ್ರೇಸ್‌ನ ಸತೀಶ್‌ ಜಾರಕಿಹೊಳಿ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
60 ವರ್ಷಗಳಿಂದ ಸತತವಾಗಿ ಹಿಂದುಗಳ ಬಗ್ಗೆ ತುಚ್ಚವಾಗಿ ಮಾತನಾಡುತ್ತ ಬಂದಿರುವ ಕಾಂಗ್ರೇಸಿಗರು ವೋಟಿಗಾಗಿ ಹಿಂದೂಗಳನ್ನು ವಿಭಜನೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಕಾಂಗ್ರೇಸಿಗರ ಆಡಳಿತದಲ್ಲಿ ನಡೆದಿರುವ ಹಿಂದುಗಳ ಬಲಿದಾನಗಳ ಬಗ್ಗೆ ಯಾರೊಬ್ಬ ಕಾಂಗ್ರೇಸಿಗನು ಮಾತನಾಡುತ್ತಿಲ್ಲ ಬದಲಾಗಿ ಅವಹೇಳನಕಾರಿಯಾಗಿ ಮಾತನಾಡುತ್ತಾ ಮತ್ತೇ ಮತ್ತೇ ಹಿಂದುಗಳ ಭಾವನೆಗೆ ಧಕ್ಕೆಯುಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಕ್ಕುಂದೂರು ಮಾತನಾಡಿ, ಸಿದ್ಧರಾಮಯ್ಯ, ದಿಗ್ವಿಜಯ್‌ ಸಿಂಗ್, ತಮಿಳುನಾಡಿನ ಎ. ರಾಜ ಹೀಗೆ ಕಾಂಗ್ರೇಸಿನ ಅನೇಕರು ಹಿಂದು, ಹಿಂದುತ್ವದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಲೇ ಇದ್ದಾರೆ. ಹಿಂದುತ್ವ ಎನ್ನುವುದು ಪವಿತ್ರವಾದುದು. ಅದುವೇ ಬಿಜೆಪಿಯ ಜೀವಾಳ. ಕಾಂಗ್ರೆಸ್ ಯಾವುದೇ ಒಂದು ಧರ್ಮ, ಜಾತಿಯನ್ನು ಓಲೈಕೆ ಮಾಡಿಕೊಂಡು ಅಧಿಕಾರಕ್ಕೆ ಬರುವ ಭ್ರಮೆಯಿದ್ದರೆ ಅದು ಎಂದಿಗೂ ಕೈಗೂಡದು. ಕಾಂಗ್ರೆಸ್‌ಗೆ ಅವರ ಹೇಳಿಕೆಯೇ ಮುಳುವಾಗಲಿದೆ. ಇದಕ್ಕೆ ತಕ್ಕ ಉತ್ತರವನ್ನು ಜನತೆ ನೀಡಲಿದ್ದಾರೆ ಎಂದರು.

ಗೇರು ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದಂತೆ ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್‌ ಹಿಂದು ವಿರೋಧಿ ಹೇಳಿಕೆ ನೀಡುತ್ತಿದೆ. ಹಿಂದುತ್ವವನ್ನು ಎಂದಿಗೂ ರಾಜಕೀಯ ಮಾಡಲು ಬಿಡಬಾರದು. ಸಚಿವ ಸುನೀಲ್‌ ಕುಮಾರ್ ನಾನು ಸ್ವಾಭಿಮಾನಿ ಹಿಂದು ಅಭಿಯಾನ ಶುರುಮಾಡಿರುತ್ತಾರೆ. ಪ್ರತಿ ಹಿಂದುಗಳು ಹೆಮ್ಮೆಯಿಂದ ನಾನು ಹಿಂದು ಎನ್ನಬೇಕು. ಹಿಂದುತ್ವಗೋಸ್ಕರ ಜೀವ ಕೊಡಲು ಸಿದ್ಧರಿರಬೇಕು. ಹಿಂದು ಜಾಗೃತಿಗೊಂಡು ಹಿಂದುತ್ವಕ್ಕಾಗಿ ಉಗ್ರ ಹೋರಾಟಕ್ಕೂ ಮುಂದಾಗಬೇಕು. ಹಿಂದುಗಳು ಕಾಂಗ್ರೆಸ್‌ ನ ಕುಟಿಲ ನಾಟಕದ ಬಗ್ಗೆ ಎಚ್ಚರಿಕೆಯಿಂದಿದ್ದು, ಹಿಂದು ಏನೆಂದು ಕಾಂಗ್ರೆಸ್ಸಿನವರಿಗೆ ತೋರಿಸಿಕೊಡಬೇಕೆಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಸುಮಾ ಕೇಶವ್‌, ಸದಸ್ಯರು, ವಿವಿಧ ಸ್ತರದ ಚುನಾಯಿತ ಪ್ರತಿನಿಧಿಗಳು, ಬಿಜೆಪಿ ಶಕ್ತಿ ಕೆಂದ್ರದ ಅಧ್ಯಕ್ಷರು, ಯುವಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸುಹಾಸ್‌ ಶೆಟ್ಟಿ ಮುಟ್ಲುಪಾಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!