Saturday, December 10, 2022
spot_img
Homeಸುದ್ದಿಶಿಕ್ಷಣ ಮತ್ತು ಸಂಘಟನೆಯಿಂದ ಸಮಾಜದ ಅಭಿವೃದ್ಧಿ - ಸುನೀಲ್‌ ಕುಮಾರ್‌

ಶಿಕ್ಷಣ ಮತ್ತು ಸಂಘಟನೆಯಿಂದ ಸಮಾಜದ ಅಭಿವೃದ್ಧಿ – ಸುನೀಲ್‌ ಕುಮಾರ್‌

ಕಾರ್ಕಳ: ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ, ಉನ್ನತ ಶಿಕ್ಷಣ ಪಡೆಯಲು ಸಂಘಟನೆಗಳು ವಿದ್ಯಾರ್ಥಿಗಳಿಗೆ ಸಹಕರಿಸಬೇಕು ಎಂದು ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ಹೇಳಿದರು. ಅವರು ನ.7 ರಂದು ಹೊಸ್ಮಾರು ಬಲ್ಯೊಟ್ಟು ಗುರುಕೃಪಾ ಸೇವಾ ಆಶ್ರಮದಲ್ಲಿ ಶ್ರೀ ನಾರಾಯಣ ಗುರು ಸೇವಾ ಸಂಘದ ವತಿಯಿಂದ ನಡೆದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣವೇ ಸಂಘಟನೆಗಳ ಗುರಿಯಾಗಬೇಕು. ಸಂಘಟನೆಗಳು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಆ ಮೂಲಕ ಸಮಾದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಸೋಲೂರು ಮಠಾಧಿಪತಿ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಪರಸ್ಪರ ಮನಸ್ತಾಪ ಬಿಟ್ಟು ಸಕರಾತ್ಮಕ ಚಿಂತನೆಯೊಂದಿಗೆ ಸಂಘಟನೆಯನ್ನು ಬೆಳೆಸಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾಸ್ಕರ್ ಕೋಟ್ಯಾನ್ ನಾರಾಯಣ ಗುರುಗಳ ತತ್ವಾದರ್ಶಗಳೊಂದಿಗೆ ಸಂಘಟನೆಗೆ ಒತ್ತು ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸದಾನಂದ ಪೂಜಾರಿ ವಹಿಸಿದ್ದರು.

ಸನ್ಮಾನ:
ಸಚಿವ ಸುನೀಲ್‌ ಕುಮಾರ್‌ ಮತ್ತು ಸಂಘದ ಹಿರಿಯರಾದ ಪೊಸಾರು ಅಣ್ಣಿ ಪೂಜಾರಿಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಗೀತಾಂಜಲಿ ಸುವರ್ಣ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ.ಅರ್ ರಾಜು, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಅಮಿತ್ ಸುವರ್ಣ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ನಯನಾ ಲಕ್ಷ್ಮಣ್ ಉಪಸ್ಥಿತರಿದ್ದರು. ಪ್ರಶಾಂತ್ ಚಿತ್ತಾರ ಸ್ವಾಗತಿಸಿ, ಪ್ರವೀಣ್ ಎಸ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ಹರಿಣಾಕ್ಷಿ ಅಣ್ಣಿಪೂಜಾರಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!