ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

ಕಾರ್ಕಳ : ಹಿರಿಯಂಗಡಿ ಶ್ರೀ ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವವು ನ.8 ರಂದು ಜರುಗಿತು. ಧಾರ್ಮಿಕ ವಿಧಿವಿಧಾನ ನವಕಪ್ರಧಾನ ಹೋಮ, ಮಹಾಪೂಜೆ, ಅನ್ನಸಂತರ್ಪಣೆ, ರಂಗಪೂಜೆ ಉತ್ಸವ ಬಲಿ ಇತ್ಯಾದಿ ಧಾರ್ಮಿಕ ವಿಧಿ

ವಿಧಾನಗಳನ್ನು ಕ್ಷೇತ್ರದ ತಂತ್ರಿಗಳಾದ ಏಡಪದವು ಬಿ. ಸುಬ್ರಮಣ್ಯ ತಂತ್ರಿ ಹಾಗೂ ಪ್ರಧಾನ ಅರ್ಚಕ ಕೈಲಾಜೆ ದಿನೇಶ್ ಭಟ್, ಅನಿಲ್ ಭಟ್ ನೆರವೇರಿಸಿದರು. ಕರ್ನಾಟಕ ಮರಾಠ ಸಮುದಾಯದ ಅಭಿವೃದ್ದಿ ನಿಗಮದ ಆಧ್ಯಕ್ಷ ಡಾ. ಎಂ. ಜಿ. ಮೂಳೆ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್ ರಾವ್, ತೀರ್ಥಹಳ್ಳಿ ವಿನಯ್ ಜಾಧವ್, ರಮೇಶ್ ರಾವ್ ಬೆಂಗಳೂರು, ಉಡುಪಿ ಯೂನಿವರ್ಸಲ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಮದ್ವೇಶ್ ಬಹುಮಾನ್, ಮಂಗಳೂರು ಕೆ.ಕೆ.ಎಂ.ಪಿ. ಅಧ್ಯಕ್ಷ ಚಂದ್ರಶೇಖರ ರಾವ್ ಮುಲ್ಕಿ, ಶುಭದ ರಾವ್, ಗುರುಪ್ರಸಾದ್ ರಾವ್ ಉಪಸ್ಥಿತರಿದ್ದರು.
ಸಹಾಯ ಧನ ವಿತರಣೆ
ಸಮಾಜದ ವಿದ್ಯಾರ್ಥಿ-ವಿಧ್ಯಾರ್ಥಿನೀಯರಿಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಗರಿಷ್ಟ ಅಂಕ ಪಡೆದವರಿಗೆ ಸನ್ಮಾನ ಕಾರ್ಯಕ್ರಮ, ನವರಾತ್ರಿ ಮಹೋತ್ಸವ ಅನ್ನದಾನ ಸೇವಾದಾರರಿಗೆ ಗೌರವಾರ್ಪಣೆ ಹಾಗೂ ಸಹಾಯಧನ ವಿತರಣೆ ಮಾಡಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.
ಉಚಿತ ಕನ್ನಡಕ ವಿತರಣೆ
ಛತ್ರಪತಿ ಫೌಂಡೇಶನ್ ಮತ್ತು ವಿವಿಧ ಸಂಘಟನೆಗಳಿಂದ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 44 ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್‌ ರಾವ್‌, C.A.ಹರೀಶ್ ರಾವ್, ಮೊಕ್ತೇಸರಾದ ಗಣೇಶ್ ರಾವ್, ಸುಧೀಂದ್ರ ರಾವ್, ರಾಮಚಂದ್ರರಾವ್, ದಯಾನಂದ್ ರಾವ್, ಗುಣ ಪ್ರಕಾಶ್ ರಾವ್ ಮತ್ತು ವೀರೇಂದ್ರ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





























































































































































































































error: Content is protected !!
Scroll to Top