Saturday, December 10, 2022
spot_img
Homeಸ್ಥಳೀಯ ಸುದ್ದಿಸತೀಶ್‌ ಜಾರಕಿಹೊಳಿ ವಿರುದ್ಧ ಕೇಸು ದಾಖಲಿಸಿದ ಹಿಂ.ಜಾ.ವೇ. ಕಾರ್ಯಕರ್ತರು

ಸತೀಶ್‌ ಜಾರಕಿಹೊಳಿ ವಿರುದ್ಧ ಕೇಸು ದಾಖಲಿಸಿದ ಹಿಂ.ಜಾ.ವೇ. ಕಾರ್ಯಕರ್ತರು

ಕಾರ್ಕಳ : ಸತೀಶ್‌ ಜಾರಕಿಹೊಳಿ ಸಾರ್ವಜನಿಕ ಭಾಷಣದಲ್ಲಿ ಹಿಂದೂ ಎಂದರೆ ಅಶ್ಲೀಲ ಪದ ಎಂದು ಹೇಳಿಕೆ ನೀಡಿದ್ದಲ್ಲದೆ, ಪದೇ ಪದೇ ಈ ವಿಚಾರವಾಗಿ ಮಾಧ್ಯಮಗಳಲ್ಲಿ ಸಮರ್ಥಿಸುತ್ತಿದ್ದು, ಹಿಂದೂ ಧರ್ಮವನ್ನು ಹೀಯಾಳಿಸುತ್ತಿದ್ದಾರೆ ಎಂದು ಕಾರ್ಕಳ ಹಿಂದು ಜಾಗರಣ ವೇದಿಕೆ ಖಂಡಿಸಿದೆ. ಈ ಹೇಳಿಕೆಯಿಂದ ಅನಾದಿ ಕಾಲದಿಂದಲೂ ಹಿಂದೂ ಧರ್ಮದ ಅನುಯಾಯಿಯಾಗಿರುವ ಸಮಸ್ತ ಹಿಂದೂ ಧರ್ಮೀಯರ ಮನಸ್ಸಿಗೆ ತುಂಬಾ ಘಾಸಿ ತಂದಿದೆ. ಸ್ವಸ್ತ ಸಮಾಜದಲ್ಲಿ ಹುಳಿ ಹಿಂಡುವ ಆಂತರೀಕ ಕ್ಷೋಭೆ ಉಂಟು ಮಾಡುವ ಹಾಗೂ ಜಾತಿ, ಮತ, ಧರ್ಮಗಳ ಮಧ್ಯೆ ದ್ವೇಷ ಉಂಟು ಮಾಡಿರುವುದಲ್ಲದೆ, ಬಾಬಾ ಸಾಹೇಬ್‌ ಅಂಬೇಡ್ಕರ್‌ ರಚಿತ ಶ್ರೇಷ್ಠ ಸಂವಿಧಾನದಲ್ಲಿ ಉಲ್ಲೇಖವಾಗಿರುವ ಹಿಂದೂ ಪದದ ವ್ಯಾಖ್ಯಾನವನ್ನೇ ಅಣಕಿಸುತ್ತಿದೆ ಮತ್ತು ಅವರ ಹೇಳಿಕೆ ಸಂವಿಧಾನ ವಿರೋಧಿ ಹೇಳಿಕೆಯಾಗಿದೆ ಎಂದು ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಕಳ ಹಿಂದು ಜಾಗರಣಾ ವೇದಿಕೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಗುರುಪ್ರಸಾದ್‌ ನಾರಾವಿ, ಸುಜಿತ್‌ ಕುಂದರ್‌, ರಮೇಶ್‌ ಕಲ್ಲೊಟ್ಟೆ, ಪ್ರಶಾಂತ್‌ ನಾಯಕ್‌, ಸುಭಾಶ್ಚಂದ್ರ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!