Saturday, December 10, 2022
spot_img
Homeಸ್ಥಳೀಯ ಸುದ್ದಿಸತೀಶ್‌ ಜಾರಕಿಹೊಳಿ ಹೇಳಿಕೆ - ಗುರುಪ್ರಸಾದ್‌ ನಾರಾವಿ ಖಂಡನೆ

ಸತೀಶ್‌ ಜಾರಕಿಹೊಳಿ ಹೇಳಿಕೆ – ಗುರುಪ್ರಸಾದ್‌ ನಾರಾವಿ ಖಂಡನೆ

ಕಾರ್ಕಳ : ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸತೀಶ್ ಜಾರಕಿಹೊಳಿಯು ಪದೆ ಪದೇ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಆಂತರಿಕ ಕ್ಷೋಭೆಯನ್ನು ಉಂಟು ಮಾಡಿ, ಸಮಾಜದ ಸ್ವಾಸ್ಥ್ಯ ಕದಡುತ್ತಿರುವ ಇಂತಹ ವ್ಯಕ್ತಿಗಳ ಹೇಳಿಕೆ ಖಂಡನೀಯವೆಂದು ಹಿಂದು ಜಾಗರಣ ವೇದಿಕೆ ತಾಲೂಕು ಸಂಯೋಜಕ ಗುರುಪ್ರಸಾದ್‌ ನಾರಾವಿ ಹೇಳಿದರು. ಇಡೀ ವಿಶ್ವವೇ ಗೌರವದಿಂದ ಕಾಣುವ ಹಿಂದು ಧರ್ಮವನ್ನು ತನ್ನ ಹರಕಲು ಬಾಯಿಯಿಂದ ಸತೀಶ್‌ ಬಾಯಿಗೆ ಬಂದಂತೆ ಬೊಗಳುತ್ತಿದ್ದಾರೆ. ಸರಕಾರ ಮತ್ತು ಸಂಬಂಧಪಟ್ಟವರು ಸತೀಶ್ ಜಾರಕಿಹೊಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗುರುಪ್ರಸಾದ್‌ ನಾರಾವಿ ಆಗ್ರಹಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!