Saturday, December 10, 2022
spot_img
Homeಸುದ್ದಿಕಾಂಗ್ರೆಸ್‌ನಿಂದ 10 ಸಲ ಶಾಸಕನಾದ ಮುಖಂಡ ಬಿಜೆಪಿ ಸೇರ್ಪಡೆ

ಕಾಂಗ್ರೆಸ್‌ನಿಂದ 10 ಸಲ ಶಾಸಕನಾದ ಮುಖಂಡ ಬಿಜೆಪಿ ಸೇರ್ಪಡೆ


ಅಹಮದಾಬಾದ್: ಗುಜರಾತ್‌ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಿಗೆ ಪಕ್ಷಾಂತರ ಪರ್ವವೂ ಶುರುವಾಗಿದೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯಲು ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಈ ಸಲವೂ ಬಿಜೆಪಿಯೇ ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಅಂದಾಜಿಸಿರುವ ಕಾರಣ ಆ ಪಕ್ಷಕ್ಕೆ ಸೇರುವವರ ಸಂಖ್ಯೆಯೂ ದೊಡ್ಡದಿದೆ. ಆದರೆ ಈ ಪೈಕಿ ಕಾಂಗ್ರೆಸ್‌ ನಾಯಕ ಮೋಹನ್‌ ಸಿನ್ಹಾ ರಾಠ್ವ ಅವರು ಬಿಜೆಪಿಗೆ ಜಿಗಿದಿರುವುದು ಕಾಂಗ್ರೆಸ್‌ ಮಾತ್ರವಲ್ಲದೆ ಬಿಜೆಪಿ ಪಾಳಯದಲ್ಲೂ ಆಶ್ಚರ್ಯವುಂಟು ಮಾಡಿದೆ. ರಾಠ್ವ 10 ಸಲ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮಂಗಳವಾರ ಪಕ್ಷದ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬುಡಕಟ್ಟು ಸಮುದಾಯದ ಪ್ರಮುಖ ನಾಯಕರಾಗಿರುವ ರಾಠ್ವ ಅವರು ಪ್ರಸ್ತುತ ಮಧ್ಯ ಗುಜರಾತ್‌ನ ಛೋಟಾ ಉದಯಪುರ ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಧಾನಸಭಾ ಚುನಾವಣೆಗೆ ತಾನು ಟಿಕೆಟ್ ಬಯಸುವುದಿಲ್ಲ ಎಂದು ರಾಠ್ವ ಘೋಷಿಸಿದ್ದರು. ಹೀಗಾಗಿ ಕಾಂಗ್ರೆಸ್ ಅವರ ಅವರ ಮಗ ರಾಜೇಂದ್ರ ಸಿನ್ಹಾ ರಾಠ್ವ ಅವರನ್ನು ಕಣಕ್ಕಿಳಿಸಲು ಬಯಸಿತ್ತು. ಆದರೆ ಈ ನಡುವೆ ರಾಠ್ವ ಕಾಂಗ್ರೆಸ್‌ಗೆ ಇನ್ನಿಲ್ಲದ ಆಘಾತ ನೀಡಿದ್ದಾರೆ.
ಗುಜರಾತ್‌ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

LEAVE A REPLY

Please enter your comment!
Please enter your name here

Most Popular

error: Content is protected !!