ನೇಪಾಳದಲ್ಲಿ ಪ್ರಬಲ ಭೂಕಂಪ : ಆರು ಸಾವು

ದಿಲ್ಲಿಯಲ್ಲೂ ಕಂಪಿಸಿದ ಭೂಮಿ

ಕಾಠ್ಮಂಡು: ನೇಪಾಳದ ದೋಟಿ ಜಿಲ್ಲೆಯಲ್ಲಿ ಬುಧವಾರ ನಸುಕಿನ ಹೊತ್ತು ಪ್ರಬಲ ಭೂಕಂಪ ಸಂಭವಿಸಿ ಹಲವು ಮನೆಗಳು ಕುಸಿದು, ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ದಿಲ್ಲಿ, ಹಿಮಾಚಲ ಪ್ರದೇಶದಲ್ಲೂ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಪಶ್ಚಾತ್‌ ಕಂಪನಗಳು ದಿಲ್ಲಿ, ನೋಯ್ಡಾ ಸೇರಿದಂತೆ ಹಲವೆಡೆ ಜನರ ಅನುಭವಕ್ಕೆ ಬಂದಿವೆ. ಭೂಕಂಪದಿಂದ ಆಘಾತಕ್ಕೊಳಗಾದ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಸುಮಾರು 10 ಸೆಕೆಂಡ್​ಗಳ ಕಾಲ ಭೂಕಂಪದ ಅನುಭವವಾಯಿತು ಎಂದು ವರದಿಯಾಗಿದೆ.
ನೇಪಾಳದಲ್ಲಿ ಮಂಗಳವಾರ ರಾತ್ರಿ 8.52ಕ್ಕೆ ಮೊದಲ ಬಾರಿಗೆ ಭೂಮಿಯು ಕಂಪಿಸಿದ ಅನುಭವವಾಯಿತು. ಮೊದಲ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.9 ಎಂದು ದಾಖಲಾಗಿತ್ತು. ಬುಧವಾರ ನಸುಕಿನ 1.57ಕ್ಕೆ ಎರಡನೇ ಬಾರಿಗೆ ಭೂಮಿ ಕಂಪಿಸಿತು. ಇದರ ತೀವ್ರತೆಯು 6.3ರಷ್ಟು ಇತ್ತು. ನೇಪಾಳದ ಎರಡನೇ ಭೂಕಂಪನದ ಅಲೆಗಳು ದಿಲ್ಲಿ , ಗಾಜಿಯಾಬಾದ್, ನೋಯ್ಡಾ, ಗುರುಗ್ರಾಮ ಮತ್ತು ಲಖನೌ ನಗರಗಳನ್ನೂ ನಡುಗಿಸಿದೆ.
ಭೂಕಂಪ ಭೂಮಿಯ 10 ಕಿ.ಮೀ. ಆಳದಲ್ಲಿ ಸಂಭವಿಸಿದೆ. ನೇಪಾಳದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ನ್ಯಾಷನಲ್ ಸೆಂಟರ್ ಫಾರ್ ಸೆಸ್​ಮೊಲಜಿ ಕಚೇರಿ ಟ್ವೀಟ್ ಮಾಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜನರು ಭೂಕಂಪನದ ಅನುಭವವನ್ನು ಹಂಚಿಕೊಂಡಿದ್ದಾರೆ. ಭೂಕಂಪ ಸಂಭವಿಸಿದ ಕೇವಲ ಅರ್ಧಗಂಟೆಯ ಅವಧಿಯಲ್ಲಿ ಟ್ವಿಟರ್​ನಲ್ಲಿ #earthquake ಹ್ಯಾಷ್​ಟ್ಯಾಗ್ ಟ್ರೆಂಡ್ ಆಗಿತ್ತು. ಭಾರತದಲ್ಲಿ ಭೂಕಂಪದಿಂದ ಜೀವಹಾನಿ ಅಥವಾ ಆಸ್ತಿಹಾನಿಯಾದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.









































































































































































error: Content is protected !!
Scroll to Top