Thursday, December 1, 2022
spot_img
Homeಸುದ್ದಿರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಆಳ್ವಾಸ್ ಹೈಸ್ಕೂಲಿನ ಪ್ರಾಜೆಕ್ಟ್

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಆಳ್ವಾಸ್ ಹೈಸ್ಕೂಲಿನ ಪ್ರಾಜೆಕ್ಟ್

ಮೂಡುಬಿದಿರೆ: ಪುತ್ತೂರಿನ ವಿವೇಕಾನಂದ ಸಂಸ್ಥೆಯು ಸೈನ್ಸ್ ಸೊಸೈಟಿ ಆಫ್ ಇಂಡಿಯಾದ ಸಹಯೋಗದೊಂದಿಗೆ ಆಯೋಜಿಸಿದ ಆವಿಷ್ಕಾರ್ -2022 ಅಂಗವಾಗಿ ನಡೆದ ಇನ್‌ಸೆಫ್ ರೀಜನಲ್ ಸೈನ್ಸ್ ಫೇರ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ 8 ನೇ ತರಗತಿಯ ವಿದ್ಯಾರ್ಥಿಗಳಾದ ಅಮೋಘ ಹೆಬ್ಬಾರ್ ಮತ್ತು ಈಶಾನ್ ವೆಂಕಟೇಶ್ ಜೂನಿಯರ್ ವಿಭಾಗದಲ್ಲಿ ಪ್ರದರ್ಶಿಸಿದ ಪ್ರಾಜೆಕ್ಟ್ ಬೆಳ್ಳಿ ಪದಕ ಗಳಿಸಿ ರಾಷ್ಟ್ರ ಮಟ್ಟದ ಪ್ರದರ್ಶನಕ್ಕೆ ಆಯ್ಕೆಗೊಂಡಿದೆ.
ತೆಂಗಿನ ಗೆರಟೆ ಎಣ್ಣೆಯ ಔಷಧೀಯ ಗುಣಗಳ ಅಧ್ಯಯನದ ಈ ಪ್ರಾಜೆಕ್ಟ್‌ಗೆ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಡಾ| ಅಜಿತ್ ಹೆಬ್ಬಾರ್ ಮಾರ್ಗದರ್ಶನ ನೀಡಿದ್ದರು. ಸೀನಿಯರ್ ವಿಭಾಗದ ವಿದ್ಯಾರ್ಥಿನಿಯರಾದ ನಿಧಿ ಬೇಡೆಕರ್ ಮತ್ತು ನಿಧಿ ಶೆಟ್ಟಿ ಮಂಡಿಸಿದ ಪರಿಸರ ಸ್ನೇಹಿ ಧಾನ್ಯ ರಕ್ಷಣೆ ಎಂಬ ಪ್ರಾಜೆಕ್ಟ್ ಕಂಚಿನ ಪದಕಗಳಿಸಿ ವೀಕ್ಷಕರ ಗಮನ ಸೆಳೆಯಿತು. ವಿಜ್ಞಾನ ಶಿಕ್ಷಕಿಯಾದ ಜೋಸಲಿನ್ ಲಸ್ರಾಡೊ ಈ ಪ್ರಾಜೆಕ್ಟಿಗೆ ಮಾರ್ಗದರ್ಶಕಿಯಾಗಿದ್ದರು.

ಆಳ್ವಾಸ್ ಹೈಸ್ಕೂಲು, ಸ್ಟೇಟ್ ವಿಭಾಗದ ರಾಜ್ ಬಂಗೇರ ಹಾಗೂ ಶಾಸ್ತ ಸಂಪ್ರೀತ್ ಸಿದ್ಧಪಡಿಸಿದ ಬಿತ್ತನೆ ಯಂತ್ರ ಗೌರವಾನ್ವಿತ ಉಲ್ಲೇಖ ವಿಭಾಗದಲ್ಲಿ ತೀರ್ಪುಗಾರರ ಮೆಚ್ಚುಗೆ ಗಳಿಸಿತು. ಶಿಕ್ಷಕಿಯರಾದ ಸಂಧ್ಯಾ ಹಾಗೂ ಪೂಜಾ ಈ ಪ್ರಾಜೆಕ್ಟ್‌ಗೆ ಸಹಕಾರ ನೀಡಿದರು. ಮುಂದಿನ ಹಂತದ ರಾಷ್ಟ್ರ ಮಟ್ಟದ ಸ್ಪರ್ಧೆಯು ಡಿಸೆಂಬರ್‌ನಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!