Saturday, December 10, 2022
spot_img
Homeಸುದ್ದಿನ.13: ಪೆರ್ವಾಜೆ ನಾರಾಯಣ ಗುರು ಸಭಾಭವನದಲ್ಲಿ 7ನೇ ವರ್ಷದ ಪಟ್ಲ ಸಂಭ್ರಮೋತ್ಸವ

ನ.13: ಪೆರ್ವಾಜೆ ನಾರಾಯಣ ಗುರು ಸಭಾಭವನದಲ್ಲಿ 7ನೇ ವರ್ಷದ ಪಟ್ಲ ಸಂಭ್ರಮೋತ್ಸವ

ಕಾರ್ಕಳ : ಅಶಕ್ತ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆಗೊಂಡ ಮಂಗಳೂರಿನ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‌ನ ಕಾರ್ಕಳ ಘಟಕದ 7ನೇ ವರ್ಷದ ಪಟ್ಲ ಸಂಭ್ರಮೋತ್ಸವ ನ.13 ರಂದು ಪೆರ್ವಾಜೆಯಲ್ಲಿರುವ ಬಿಲ್ಲವ ಸಮಾಜ ಸಂಘದ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ.
ರಶ್ಮಿ ಚಾರಿಟೇಬಲ್ ಟ್ರಸ್ಟ್‌ನ ಅದ್ಯಕ್ಷ ಡಿ. ಆರ್. ರಾಜು ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್‌ ಅಧ್ಯಕ್ಷತೆಯನ್ನು ವಹಿಸಲಿದ್ದು, ಪಟ್ಲ ಪೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ, ಪ್ರಭಾ ಗೊಪಾಲಕೃಷ್ಣ ಶೆಟ್ಟಿ, ಎನ್. ರಾಜೇಂದ್ರ ಚೌಟ, ಕೇಂದ್ರಿಯ ಸಮಿತಿಯ ಪುರುಷೋತ್ತಮ ಭಂಡಾರಿ, ಸಿ.ಎ. ಸುದೇಶ್ ಕುಮಾರ್ ರೈ, ವಿಜಯ ಶೆಟ್ಟಿ ಮತ್ತು ಪದ್ಮನಾಭ ಗೌಡ ಉಪಸ್ಥಿತರಿರಲಿದ್ದಾರೆ. ಕಲಾವಿದರಾದ ರವಿರಾಜ ಜೈನ್ ಕಾರ್ಕಳ ಮತ್ತು ಗಣೇಶ ಶೆಟ್ಟಿ ಸಾಣೂರು ಅವರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪಾವಂಜೆ ಮೇಳದವರಿಂದ ನಾಗ ಸಂಜೀವನ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಕಾರ್ಯದರ್ಶಿ ಮಹಾವೀರ ಪಾಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

Most Popular

error: Content is protected !!