Saturday, December 10, 2022
spot_img
Homeಸ್ಥಳೀಯ ಸುದ್ದಿಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ: ಇಬ್ಬರಿಗೆ ಗಾಯ

ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ: ಇಬ್ಬರಿಗೆ ಗಾಯ

ಕಾರ್ಕಳ: ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದು ಆಟೋ ಚಾಲಕ ಮತ್ತು ಪ್ರಯಾಣಿಕ ಗಾಯಗೊಂಡ ಘಟನೆ ನ.6ರಂದು ಕಾರ್ಕಳ ಪೇಟೆಯ ಸಾಲ್ಮರದಲ್ಲಿ ಗ್ಯಾಲಕ್ಸಿ ಹಾಲ್‌ ಸಮೀಪ ಸಂಭವಿಸಿದೆ. ಕುಂಟಲ್ಪಾಡಿಯ ಸರ್ವತ್‌ (23) ಎಂಬವರ ಆಟೋಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ಬಿರುಸಿಗೆ ಆಟೋ ಪಲ್ಟಿಯಾಗಿ ಸರ್ವತ್‌ ಮತ್ತು ಪ್ರಯಾಣಿಕ ದೀಪಕ್‌ ಎಂಬವರು ಗಾಯಗೊಂಡಿದ್ದಾರೆ. ಕಾರು ಕೂಡ ಜಖಂಗೊಂಡಿದೆ. ಕಾರು ಚಾಲಕ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎಂದು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!