Saturday, December 10, 2022
spot_img
Homeಸುದ್ದಿನ 13: ಆಳ್ವಾಸ್ ಶಾಲಾ ಆವರಣದಲ್ಲಿ ಅಗ್ನಿವೀರ್ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆ

ನ 13: ಆಳ್ವಾಸ್ ಶಾಲಾ ಆವರಣದಲ್ಲಿ ಅಗ್ನಿವೀರ್ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆ

ಮೂಡುಬಿದಿರೆ: ಹಾವೇರಿ ಅಗ್ನಿಪಥ್ ರ‍್ಯಾಲಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯು ಮಂಗಳೂರು ಸೇನಾ ನೇಮಕಾತಿ ಕಛೇರಿಯ ಸಹಯೋಗದಲ್ಲಿ ನವೆಂಬರ್ 13ರಂದು ಪುತ್ತಿಗೆಯ ವಿವೇಕಾನಂದ ನಗರದ ಆಳ್ವಾಸ್ ಶಾಲೆಯ ಆವರಣದಲ್ಲಿ ನಡೆಯಲಿದೆ.

ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ವಿಜಯಪುರ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸೇರಿದಂತೆ 11 ಜಿಲ್ಲೆಗಳಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕಪ್ಪು ಅಥವಾ ನೀಲಿ ಬಣ್ಣದ ಪೆನ್ ಹಾಗೂ ಕ್ಲಿಪ್ ಬೋರ್ಡ್ನೊಂದಿಗೆ ನವೆಂಬರ್ 13 ರಂದು ಬೆಳಿಗ್ಗೆ 4 ಗಂಟೆಗೆ ಪರೀಕ್ಷಾ ಸ್ಥಳದಲ್ಲಿ ಹಾಜರಿರುವಂತೆ ತಿಳಿಸಲಾಗಿದೆ. ಮಂಗಳೂರಿನ ಸೇನಾ ನೇಮಕಾತಿ ಕಛೇರಿಯ ನಿರ್ದೇಶಕ ಕರ್ನಲ್ ಅನೂಜ್ ಗುಪ್ತ ಈಗಾಗಲೆ ಸ್ಥಳ ಪರೀಶಿಲನೆ ನಡೆಸಿದ್ದು, ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆಳ್ವಾಸ್ ಸಂಸ್ಥೆಯಿಂದ ಪರೀಕ್ಷೆಯ ಹಿಂದಿನ ದಿನ ತಂಗುವ (ನ.12) ವಿದ್ಯಾರ್ಥಿಗಳಿಗೆ ಹಾಲ್‌ನ ವ್ಯವಸ್ಥೆ ಮಾಡಲಾಗಿದ್ದು, ಅಭ್ಯರ್ಥಿಗಳು ಚಾಪೆ ಹಾಗೂ ಚಾದರವನ್ನು ತೆಗೆದುಕೊಂಡು ಬರುವಂತೆ ತಿಳಿಸಲಾಗಿದೆ. ಸ್ನಾನ ಹಾಗೂ ಶುಚಿಗೊಳ್ಳಲು ಶೌಚಾಲಯದ ವ್ಯವಸ್ಥೆಯನ್ನು ಸ್ಥಳದಲ್ಲಿ ಮಾಡಲಾಗಿದೆ ಎಂದು ಪರೀಕ್ಷಾ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!