Tuesday, December 6, 2022
spot_img
Homeಸುದ್ದಿಕಾರ್ಕಳ ಸರ್ವಜ್ಞ ವೃತ್ತ ಬಳಿ ಬೇಕಿದೆ ಜೀಬ್ರಾ ಕ್ರಾಸ್‌

ಕಾರ್ಕಳ ಸರ್ವಜ್ಞ ವೃತ್ತ ಬಳಿ ಬೇಕಿದೆ ಜೀಬ್ರಾ ಕ್ರಾಸ್‌

ವರದಿ : ನಳಿನಿ ಎಸ್‌. ಸುವರ್ಣ

ಕಾರ್ಕಳ : ಪಾದಚಾರಿಗಳು ಸುರಕ್ಷತೆಯಿಂದ ರಸ್ತೆ ದಾಟಲು ಮತ್ತು ಸಂಚಾರಿ ನಿಯಮಗಳ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ತಾಲೂಕು ಕಚೇರಿ ಸಮೀಪದ ಸರ್ವಜ್ಞ ವೃತ್ತದ ಬಳಿ ಜೀಬ್ರಾ ಕ್ರಾಸ್‌ ಸೂಚನಾ ಫಲಕದ ಅವಶ್ಯಕತೆಯಿದೆ. ನಕ್ರೆಯಿಂದ ಕಾರ್ಕಳ ಪೇಟೆ ಮತ್ತು ಬೈಪಾಸ್‌ನಿಂದ ಬಂಗ್ಲೆಗುಡ್ಡೆ ಸಂಪರ್ಕಿಸುವ ಈ ವೃತ್ತದಲ್ಲಿ ಸರಿಯಾದ ಸೂಚನಾ ಫಲಕ ಇಲ್ಲದೆ ಇರುವ ಕಾರಣ ರಸ್ತೆ ದಾಟುವಾಗ ಜನ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೆ ವಾಹನ ಸವಾರರಿಗೂ ಪಾದಚಾರಿಗಳು ಯಾವ ಕಡೆ ಸಾಗುತ್ತಿದ್ದಾರೆ ಎಂದು ತಿಳಿಯದೆ ಅಪಘಾತಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಈ ವೃತ್ತದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸಿದೆ.

ಜೀಬ್ರಾ ಕ್ರಾಸ್‌ ಅಗತ್ಯ
ಪಾದಚಾರಿಗಳು ರಸ್ತೆ ದಾಟಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇಲ್ಲೊಂದು ಜೀಬ್ರಾ ಕ್ರಾಸ್‌ ಅಳವಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ರೀತಿಯಾದ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಸರ್ವಜ್ಞ ವೃತ್ತದ ಬಳಿ ಉತ್ತಮವಾದ ರಸ್ತೆಯಿದೆ. ಈ ವೃತ್ತದಲ್ಲಿ ಅದೆಷ್ಟೋ ಬಾರಿ ಅಪಘಾತ ಸಂಭವಿಸಿದೆ. ವಾಹನಗಳ ವೇಗ ನಿಯಂತ್ರಿಸಲು ಬ್ಯಾರಿಕೇಡ್‌ ಅಳವಡಿಸಲಾಗಿದ್ದರೂ ಅಪಘಾತ ಪ್ರಮಾಣ ಕಡಿಮೆಯಾಗಿಲ್ಲ. ಜೀಬ್ರಾ ಕ್ರಾಸ್‌ ಅಳವಡಿಸಿದರೆ ಪಾದಚಾರಿಗಳು ಸುಲಭವಾಗಿ ರಸ್ತೆ ದಾಟಬಹುದಾಗಿದೆ ಮತ್ತು ವಾಹನ ಸವಾರಿಗೂ ಗೊಂದಲವಿಲ್ಲದೆ ಮುಂದುವರಿಯಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕೆಂದು ಜಾಗೃತಿ ಫೌಂಡೇಶನ್‌ ಸಂಚಾಲಕ ಸಿಯಾ ಸಂತೋಷ್‌ ನಾಯಕ್ ಅಭಿಪ್ರಾಯ‌ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!