Saturday, December 10, 2022
spot_img
Homeರಾಜ್ಯಮತದಾನಕ್ಕೆ ಕೆಲವೇ ದಿನಗಳಿರುವಾಗ ಬಿಜೆಪಿ ಸೇರಿದ 26 ಕಾಂಗ್ರೆಸ್ ನಾಯಕರು

ಮತದಾನಕ್ಕೆ ಕೆಲವೇ ದಿನಗಳಿರುವಾಗ ಬಿಜೆಪಿ ಸೇರಿದ 26 ಕಾಂಗ್ರೆಸ್ ನಾಯಕರು

ಶಿಮ್ಲಾ : ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಹಲವು ಭರವಸೆಗಳನ್ನು ಘೋಷಿಸುತ್ತಿವೆ. ಈ ನಡುವೆ ಪಕ್ಷಾಂತರ ಪರ್ವವೂ ಆರಂಭವಾಗಿದ್ದು, ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಾದ ಧರ್ಮಪಾಲ್ ಠಾಕೂರ್ ಖಂಡ್ ಬಿಜೆಪಿಗೆ ಸೇರಿದ್ದಾರೆ. ಖಂಡ್ ಅವರು ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಧರ್ಮಪಾಲ್ ಠಾಕೂರ್ ಖಂಡ್ ಅವರೊಂದಿಗೆ 26 ಇತರ ನಾಯಕರು ಸಹ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಮತದಾನಕ್ಕೆ ಕೇವಲ ನಾಲ್ಕು ದಿನ ಬಾಕಿಯಿದೆ. ಕೊನೆಯ ಹಂತದಲ್ಲಿ ನಡೆದಿರುವ ಈ ಬೆಳವಣಿಗೆಯು ಬಿಜೆಪಿಗೆ ಪೂರಕವಾಗಿದ್ದರೆ ಕಾಂಗ್ರೆಸ್​ಗೆ ಆಘಾತಕಾರಿಯಾಗಿದೆ. ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಬಿಜೆಪಿಯ ಹಿರಿಯ ನಾಯಕ ಹಾಗೂ ರಾಜ್ಯ ಉಸ್ತುವಾರಿ ಸುಧಾಮ್ ಸಿಂಗ್ ಸಮಕ್ಷಮದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾದರು. ಶಿಮ್ಲಾ ಕ್ಷೇತ್ರದ ಬಿಜೆಪಿ ಉಮೇದುವಾರ ಸಂಜಯ್ ಸೂದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!