Tuesday, December 6, 2022
spot_img
Homeಸುದ್ದಿಈಕ್ವೆಟೋರಿಯಲ್ ಗಿನಿಯಾದ ಅಕ್ರಮ ಬಂಧನದಲ್ಲಿ 16 ಭಾರತೀಯ ನಾವಿಕರು

ಈಕ್ವೆಟೋರಿಯಲ್ ಗಿನಿಯಾದ ಅಕ್ರಮ ಬಂಧನದಲ್ಲಿ 16 ಭಾರತೀಯ ನಾವಿಕರು

ಬಿಡುಗಡೆಗೊಳಿಸಿ ಕರೆತರಲು ಕೇಂದ್ರ ಸರಕಾರಕ್ಕೆ ಮೊರೆ

ಹೊಸದಿಲ್ಲಿ : ಮಧ್ಯ ಆಫ್ರಿಕಾದ ಪಶ್ಚಿಮ ಕರಾವಳಿ ದೇಶವಾಗಿರುವ ಈಕ್ವೆಟೋರಿಯಲ್ ಗಿನಿಯಾದಲ್ಲಿ ಹಡಗೊಂದನ್ನು ವಶಕ್ಕೆ ತೆಗೆದುಕೊಂಡು ಅದರಲ್ಲಿರುವ 26 ಸಿಬ್ಬಂದಿಯನ್ನು ಸೆರೆಯಿಲ್ಲಿಡಲಾಗಿದೆ. ಈ ಪೈಕಿ 16 ಭಾರತೀಯ ನಾವಿಕರಿದ್ದು, ಅವರು ಈ ಕಾನೂನುಬಾಹಿರ ಬಂಧನದಿಂದ ತಮ್ಮನ್ನು ಪಾರು ಮಾಡಲು ಭಾರತಕ್ಕೆ ಮನವಿ ಮಾಡಿದ್ದಾರೆ.
ತಮ್ಮ ಪರಿಸ್ಥಿತಿಯ ಬಗ್ಗೆ ಅವರು ವೀಡಿಯೊ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ನಾರ್ವೆಯಲ್ಲಿ ನೋಂದಣಿಯಾಗಿರುವ ಎಂಟಿ ಹೀರೋಯಿಕ್ ಇಡುನ್ ಹಡಗಿನಲ್ಲಿ ಅವರು ದುಡಿಯುತ್ತಿದ್ದರು. ಕಳೆದ ಆಗಸ್ಟ್ 12ರಂದು ಈ ಹಡಗನ್ನು ಈಕ್ವೆಟೋರಿಯಲ್ ಗಿನಿಯಾದ ಸಮುದ್ರದಲ್ಲಿ ಬಂಧಿಸಲಾಗಿದೆ.
ನೌಕಾದಳದ ಬೆಂಗಾವಲಿನಲ್ಲಿ ಹಡಗನ್ನು ಈಕ್ವೆಟೋರಿಯಲ್ ಗಿನಿಯಾದ ಲುಬಾ ಬಂದರಿಗೆ ಒಯ್ಯಲಾಗಿದೆ.
ನಮ್ಮನ್ನು ಬಿಡುಗಡೆ ಮಾಡಲು ಮತ್ತು ಈಕ್ವೆಟೋರಿಯಲ್ ಗಿನಿಯಾದಿಂದ ಭಾರತಕ್ಕೆ ಮರಳಿ ಕರೆತರಲು ಸಹಾಯ ಮಾಡುವಂತೆ ವಿನಂತಿಸುತ್ತೇವೆ. ಇಲ್ಲಿ ನಮ್ಮನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ. ಹಡಗಿನಲ್ಲಿ ಒಟ್ಟು 26 ಜನ ಸಿಬ್ಬಂದಿ ಇದ್ದಾರೆ. ಮತ್ತು ಅದರಲ್ಲಿ ನಾವು 16 ಭಾರತೀಯರು, 8 ಜನ ಶ್ರೀಲಂಕಾ ಪ್ರಜೆಗಳು, ಒಬ್ಬರು ಪೊಲೀಸ್‌ ಸಿಬ್ಬಂದಿ ಮತ್ತು ಮತ್ತೋರ್ವ ಫಿಲಿಪಿನೋ ಪ್ರಜೆ ಎಂದು ಬಂಧನದಲ್ಲಿರುಉವರು ಹೇಳಿಕೊಂಡಿದ್ದಾರೆ. ಈಗಾಗಲೇ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರಿಗೆ ಈ ವಿಷಯದ ಬಗ್ಗೆ ಮಾಹಿತಿ ದೊರಕಿದೆ. ಹೀಗಾಗಿ ವಿದೇಶಾಂಗ ಸಚಿವಾಲಯವು ಭಾರತೀಯ ಪ್ರಜೆಗಳನ್ನು ಮನೆಗೆ ಕರೆತರಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಒಂಬತ್ತು ಭಾರತೀಯರು ಸೇರಿದಂತೆ ಹದಿನೈದು ಸಿಬ್ಬಂದಿಯನ್ನು ಆಗಸ್ಟ್ 14ರಂದು ತೀರಕ್ಕೆ ಕರೆದೊಯ್ಯಲಾಯಿತು. ಅಂದಿನಿಂದ ಮಲಾಬೊದಲ್ಲಿ ಬಂಧನದಲ್ಲಿರಿಸಲಾಗಿದೆ. ಆರು ಭಾರತೀಯರು ಸೇರಿದಂತೆ ಉಳಿದ 11 ಸಿಬ್ಬಂದಿ ಹಡಗಿನಲ್ಲಿ ಉಳಿದಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!