Thursday, December 1, 2022
spot_img
Homeಸುದ್ದಿರೇಣುಕಾಚಾರ್ಯ ಸಹೋದರನ ಪುತ್ರನ ಸಾವು : ವಿನಯ್‌ ಗುರೂಜಿ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ರೇಣುಕಾಚಾರ್ಯ ಸಹೋದರನ ಪುತ್ರನ ಸಾವು : ವಿನಯ್‌ ಗುರೂಜಿ ಹೇಳಿಕೆ ದಾಖಲಿಸಿಕೊಂಡ ಪೊಲೀಸರು


ಚಿಕ್ಕಮಗಳೂರು: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಂಶಯಾಸ್ಪದ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.
25 ವರ್ಷದ ಚಂದ್ರಶೇಖರ್ ನಾಪತ್ತೆಯಾಗುವ ಮೊದಲು ಸ್ನೇಹಿತ ಕಿರಣ್ ಜೊತೆ ರಾತ್ರಿ ಹೊತ್ತು ಆಶ್ರಮಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ತಡರಾತ್ರಿ ಕಾರಿನಲ್ಲಿ ಹೊರಟ ಚಂದ್ರಶೇಖರ್ ಕಿರಣ್‌ನನ್ನು ಶಿವಮೊಗ್ಗದಲ್ಲಿ ಕಾರಿನಿಂದ ಇಳಿಸಿ ದಾವಣಗೆರೆಯ ಹೊನ್ನಾಳಿಯತ್ತ ಒಬ್ಬರೇ ಹೊರಟಿದ್ದರು
ಮನೆಗೆ ತಲುಪಬೇಕೆನ್ನುವಷ್ಟರಲ್ಲಿ ಕಳೆದ ಗುರುವಾರ ಹೊನ್ನಾಳಿ-ನ್ಯಾಮತಿ ನಡುವೆ ಬರುವ ತುಂಗಾ ಮೇಲ್ದಂಡೆ ನಾಲೆಗೆ ಕಾರು ಬಿದ್ದಿತ್ತು. ಚಂದ್ರಶೇಖರ್ ನಾಪತ್ತೆಯಾದ 5 ದಿನಗಳ ನಂತರ ಮೃತದೇಹ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಶಾಸಕ ರೇಣುಕಾಚಾರ್ಯ ಮತ್ತು ಕುಟುಂಬಸ್ಥರು ಕಾರು ಅಪಘಾತಕ್ಕೀಡಾಗಿದ್ದಲ್ಲ, ವ್ಯವಸ್ಥಿತ ಸಂಚು ನಡೆಸಿ ಚಂದ್ರಶೇಖರ್‌ ಅವರನ್ನು ಕೊಲೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದು ನಿನ್ನೆ ವಿನಯ್ ಗುರೂಜಿ ಆಶ್ರಮಕ್ಕೆ ತೆರಳಿ ಗುರೂಜಿ ಬಳಿ ಹೇಳಿಕೆ ಮತ್ತು ಮಾಹಿತಿ ಸಂಗ್ರಹಿಸಿದ್ದಾರೆ.
ಪೊಲೀಸರು ಕೇಳಿದ ಪ್ರಶ್ನೆಗಳಿಗೆಲ್ಲಾ ವಿನಯ್ ಗುರೂಜಿಯವರು ಉತ್ತರಿಸಿದ್ದು, ಆಶ್ರಮಕ್ಕೆ ರಾತ್ರಿ ಹೊತ್ತು ಬಂದಿದ್ದರು, ಅವರಲ್ಲಿ ಹೆಚ್ಚು ಮಾತನಾಡಿರಲಿಲ್ಲ. ಇಷ್ಟು ತಡವಾಗಿ ಏಕೆ ಬಂದಿರಿ, ಇದು ಬರುವ ಹೊತ್ತೇ ಎಂದು ಕೇಳಿದ್ದೆ. ಹುಷಾರಾಗಿ ಹೋಗಿ ಎಂದು ಹೇಳಿ ಕಳುಹಿಸಿದ್ದೆ, ಘಟನೆ ಬಗ್ಗೆ ನನಗೂ ನೋವಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Most Popular

error: Content is protected !!