Thursday, December 1, 2022
spot_img
Homeರಾಜ್ಯಅಯೋಧ್ಯೆ ಶ್ರೀರಾಮ ದೇವರ ದಿಗ್ವಿಜಯ ರಥಯಾತ್ರೆ ಉಡುಪಿಯಲ್ಲಿ ಭವ್ಯ ಸ್ವಾಗತ

ಅಯೋಧ್ಯೆ ಶ್ರೀರಾಮ ದೇವರ ದಿಗ್ವಿಜಯ ರಥಯಾತ್ರೆ ಉಡುಪಿಯಲ್ಲಿ ಭವ್ಯ ಸ್ವಾಗತ

ಕಾರ್ಕಳ : ಅಯೋಧ್ಯೆಯ ಶ್ರೀರಾಮ ಭವ್ಯ ಮಂದಿರದ ಪುನರ್‌ ನಿರ್ಮಾಣ ಕಾರ್ಯವು ಹಿರಿಯರು ಶತ ಶತಮಾನಗಳಿಂದ ಮಾಡಿದ ಹೋರಾಟದ ಫಲವಾಗಿ ಪ್ರಸ್ತುತ ಸಾಕಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಸಮಾಜದ ಜಾಗೃತಿ ಹಾಗೂ ರಾಮ ರಾಜ್ಯ ನಿರ್ಮಾಣದ ಸಂಕಲ್ಪದೊಂದಿಗೆ ಜಗದ್ಗುರು ಶ್ರೀ ಸತ್ಯಾನಂದ ಸರಸ್ವತಿ ಅವರ ಮಾರ್ಗದರ್ಶನ ಹಾಗೂ ಜಗದ್ಗುರು ಶ್ರೀ ಶಕ್ತಿ ಶಾಂತಾನಂದ ಮಹರ್ಷಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಶ್ರೀರಾಮದಾಸ ಆಶ್ರಮದಲ್ಲಿ ಆಯೋಜಿಸಲಾಗಿರುವ ಈ ದಿಗ್ವಿಜಯ ರಥಯಾತ್ರೆ ವಿಶ್ವ ಹಿಂದೂ ಪರಿಷತ್ತು ಅಖಿಲ ಭಾರತೀಯ ಸಂತ ಸಮಿತಿ ಇವುಗಳ ಬೆಂಬಲದೊಂದಿಗೆ ದೇಶದಾದ್ಯಂತ ನಡೆಯುತ್ತಿದ್ದು, ನ. 7 ರಂದು ಕಲ್ಯಾಣಪುರ ಸಂತೆಕಟ್ಟೆಗೆ ಆಗಮಿಸಿದ್ದು, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಮತ್ತು ಉಡುಪಿ ಶಾಸಕ ಕೆ. ರಘುಪತಿ‌ ಭಟ್ ದಿಗ್ವಿಜಯ ರಥಯಾತ್ರೆಯನ್ನು ಸ್ವಾಗತಿಸಿದರು. ಈ ರಥಯಾತ್ರೆಯು 60 ದಿನಗಳ ಕಾಲ 27 ರಾಜ್ಯಗಳಲ್ಲಿ ಒಟ್ಟು 15,000 ಕಿ.ಮೀ ಕ್ರಮಿಸಿ ಗೀತಾ ಜಯಂತಿಯಂದು ಸಮಾಪನಗೊಳ್ಳಲಿದೆ. ಈ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಉಡುಪಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಉದಯಕುಮಾರ್‌ ಶೆಟ್ಟಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಪ್ರಮೋದ್‌ ಮಧ್ವರಾಜ್‌, ಶ್ಯಾಮಲ ಕುಂದರ್‌, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮುನಿಯಾಲು ಉದಯಕುಮಾರ್‌ ಶೆಟ್ಟಿ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!