15ರ ಹರೆಯದ ಬಾಲಕನಿಂದ ನಾಲ್ಕು ಮಂದಿಯ ಹತ್ಯೆ

ಅಜ್ಜಿ, ತಾಯಿ, ತಂಗಿಯನ್ನೆ ಕೊಂದ ಪಾಪಿ

ತ್ರಿಪುರ : ತ್ರಿಪುರಾದ ಧಲೈ ಜಿಲ್ಲೆಯಲ್ಲಿ 15 ವರ್ಷದ ಬಾಲಕನೊಬ್ಬ ತಾಯಿ, ಸಹೋದರಿ ಸೇರಿ ತನ್ನದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ಸಂಭವಿಸಿದೆ. ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕ ತನ್ನ 70 ವರ್ಷದ ಅಜ್ಜ, 32 ವರ್ಷದ ತಾಯಿ, 42 ವರ್ಷದ ದೊಡ್ಡಮ್ಮ ಮತ್ತು 10 ವರ್ಷದ ತಂಗಿಯನ್ನು ಹತ್ಯೆ ಮಾಡಿದ್ದಾನೆ. ಕೊಲೆ ಮಾಡುವಾಗ ಕಿರುಚಾಟದ ಸದ್ದು ಹೊರಗಡೆ ಕೇಳಿಸಬಾರದೆಂದು ಆತ ಜೋರಾಗಿ ಮ್ಯೂಸಿಕ್​ ಪ್ಲೇ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಶವಗಳನ್ನು ಮನೆ ಸಮೀಪದಲ್ಲಿನ ಸೆಪ್ಟಿಕ್​ ಟ್ಯಾಂಕ್​ನಲ್ಲಿ ಹಾಕಿದ್ದಾನೆ. ಬಸ್​ ಕಂಡಕ್ಟರ್​ ಆಗಿರುವ ಬಾಲಕನ ತಂದೆ ಮಧ್ಯರಾತ್ರಿ ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಬಾಲಕನನ್ನು ಬಂಧಿಸಲಾಗಿದ್ದು, ಕೊಲೆ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀರು ತಿಳಿಸಿದ್ದಾರೆ.
ಬಾಲಕ ಯಾವಾಗಲೂ ಟಿವಿಯಲ್ಲಿ ಅಪರಾಧ ತನಿಖೆಯ ಕಾರ್ಯಕ್ರಮಗಳನ್ನು ನೋಡುತ್ತಿದ್ದ ಹಾಗೂ ಆನ್​ಲೈನ್​ ಗೇಮ್​ಗಳನ್ನು ಆಡುತ್ತಿದ್ದ ಎಂಬುದು ತಿಳಿದು ಬಂದಿದೆ.

Latest Articles

error: Content is protected !!