ನ.8 : ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೀಪೋತ್ಸವ

ಮಂಗಳೂರಿನ ಸನಾತನ ನಾಟ್ಯಾಲಯದವರಿಂದ ಸನಾತನ ನೃತ್ಯಾಂಜಲಿ

ಕಾರ್ಕಳ: ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ದೀಪೋತ್ಸವ ನ. 8 ರಂದು ಜರುಗಲಿದೆ. ಇದು ಕ್ಷೇತ್ರದ ಬ್ರಹ್ಮಕಲಶೋತ್ಸವದ ನಂತರ ನಡೆಯುವ ಪ್ರಥಮ ವರ್ಷದ ದೀಪೋತ್ಸವ.
ಪೂರ್ವಾಹ್ನ ಧಾರ್ಮಿಕ ವಿಧಿವಿಧಾನಗಳು, ಮಧ್ಯಾಹ್ನ ಅನ್ನಸಂತರ್ಪಣೆ, ಸಾಯಂಕಾಲ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ವೈವಿದ್ಯ ಜರುಗಲಿದೆ.
ರಾಷ್ಟ್ರ ದೇವೋ ಭವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯ ವೃಂದದವರು ಪ್ರಸ್ತುತ ಪಡಿಸುವ ಭರತನಾಟ್ಯ, ಜಾನಪದ ನೃತ್ಯ ಮತ್ತು ದೇಶ ಭಕ್ತಿಯ ನೃತ್ಯ ವೈವಿಧ್ಯ ಸನಾತನ ನೃತ್ಯಾಂಜಲಿ ಪ್ರದರ್ಶನಗೊಳ್ಳಲಿದೆ. ಭಕ್ತಾಭಿಮಾನಿಗಳು ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕ್ಷೇತ್ರದ ಆಡಳಿತ ಮೊಕ್ತೇಸರ ಗಿರೀಶ್ ರಾವ್ ವಿನಂತಿಸಿದ್ದಾರೆ.

Latest Articles

error: Content is protected !!