Saturday, December 10, 2022
spot_img
Homeರಾಜ್ಯಹಿಜಾಬ್, ಹಲಾಲ್ ವಿರುದ್ಧ ಧ್ವನಿ ಎತ್ತಿದಾಗ ದುಬೈನಿಂದ ಬೆದರಿಕೆ ಕರೆ ಬಂದಿತ್ತು : ರೇಣುಕಾಚಾರ್ಯ

ಹಿಜಾಬ್, ಹಲಾಲ್ ವಿರುದ್ಧ ಧ್ವನಿ ಎತ್ತಿದಾಗ ದುಬೈನಿಂದ ಬೆದರಿಕೆ ಕರೆ ಬಂದಿತ್ತು : ರೇಣುಕಾಚಾರ್ಯ

ದಾವಣಗೆರೆ : ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ಪ್ರಕರಣವು ದಿನಕಳೆದಂತೆ ಹಲವು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ (ನ. 5) ಪೊಲೀಸರ ವಿರುದ್ಧ ಹರಿಹಾಯ್ದಿದ್ದ ರೇಣುಕಾಚಾರ್ಯ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದ್ದರು. ಚಂದ್ರಶೇಖರ್ ಅವರು ಅಪಘಾತದಲ್ಲಿ ಮೃತಪಟ್ಟಿಲ್ಲ. ಅವರನ್ನು ಕೊಲೆ ಮಾಡಲಾಗಿದೆ ಎಂದೇ ಪ್ರತಿಪಾದಿಸುತ್ತಿದ್ದ ಅವರು ಇದೀಗ ಮತ್ತೊಮ್ಮೆ ಇದೇ ವಿಚಾರಕ್ಕೆ ಪುಷ್ಟಿಕೊಡುವಂತೆ ಮಾತನಾಡಿದ್ದಾರೆ.
‘ನಾನು ಈ ಹಿಂದೆ ಹಿಜಾಬ್​, ಆಜಾನ್ ಹಾಗೂ ಹಲಾಲ್​ ವಿರುದ್ಧ ಧ್ವನಿ ಎತ್ತಿದ್ದೆ. ಆಗ ದುಬೈನಿಂದ ನನಗೆ, ನನ್ನ ಮಗನಿಗೆ ಬೆದರಿಕೆ ಕರೆ ಬಂದಿತ್ತು. ಆದರೆ ಪೊಲೀಸರು ಮಾತ್ರ ಯಾವುದೇ ತನಿಖೆ ಮಾಡಿರಲಿಲ್ಲ. ನಾಳೆ (ನ. 7) ವಿಚಾರಣೆಗೆ ಬರಲು ಸದಾಶಿವನಗರ ಪೊಲೀಸರು ಸೂಚಿಸಿದ್ದಾರೆ. ಪ್ರಕರಣ ನಡೆದು ಹಲವು ತಿಂಗಳು ಕಳೆದಿದೆ. ಈಗ ವಿಚಾರಣೆಗೆ ಕರೆದಿದ್ದಾರೆ’ ಎಂದು ರೇಣುಕಾಚಾರ್ಯ ವಿಷಾದಿಸಿದರು.
ಚಂದ್ರಶೇಖರ್ ಕೊಲೆ ಬಗ್ಗೆ ಈಗಾಗಲೇ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಯ ಜೊತೆಗೆ ಮಾತನಾಡಿದ್ದೇನೆ. ಸೂಕ್ತ ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಬುಧವಾರ ಭೇಟಿಯಾಗುತ್ತೇನೆ ಎಂದು ಅವರು ತಿಳಿಸಿದರು. ನನಗೆ ಬೆದರಿಕೆ ಕರೆ ಬಂದಾಗಲೇ ನಾನು ದೂರು ಕೊಟ್ಟಿದ್ದೆ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಅವರು ತನಿಖೆಯನ್ನೇ ಮಾಡಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಬರಲು ಆರಂಭಿಸಿದ ಮೇಲೆ ಕರೆ ಮಾಡಿ ಠಾಣೆಗೆ ಬನ್ನಿ ಎನ್ನುತ್ತಿದ್ದಾರೆ ಎಂದು ವಿಷಾದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!