Saturday, December 10, 2022
spot_img
Homeಸುದ್ದಿನೂತನ ಪಿಂಚಣಿ ಯೋಜನೆ ಹಿಂಪಡೆಯಲು ಆಗ್ರಹ

ನೂತನ ಪಿಂಚಣಿ ಯೋಜನೆ ಹಿಂಪಡೆಯಲು ಆಗ್ರಹ

ಎನ್‌ಪಿಎಸ್‌ ನೌಕರರ ಸಂಘದಿಂದ ಸಚಿವ ಸುನಿಲ್‌ ಕುಮಾರ್‌ಗೆ ಮನವಿ

ಕಾರ್ಕಳ: ನೂತನ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ಹಿಂಪಡೆದು ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕೆಂದು ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕ ಹಾಗೂ ಕಾರ್ಕಳ ತಾಲೂಕು ಘಟಕದ ವತಿಯಿಂದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಚಿವರು ಈ ಯೋಜನೆ ಬಗ್ಗೆ ಸರಕಾರದ ಹಂತದಲ್ಲಿ ಚರ್ಚಿಸುವುದಾಗಿ ಹಾಗೂ ಎನ್‌ಪಿಎಸ್‌ ನೌಕರರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಎನ್‌ಪಿಎಸ್‌ ನೌಕರರ ಸಂಘದ ರಾಘವ ಶೆಟ್ಟಿ, ರವಿ ಎಸ್. ಪೂಜಾರಿ, ರಾಮಚಂದ್ರ ವಾಕುಡ, ವಿದ್ಯಾ ಶೆಟ್ಟಿ, ಕಾರ್ಕಳ ತಾಲೂಕು ಸಂಘದ ಸಂತೋಷ್ , ರಾಜಾರಾಮ್, ಆನಂದ್, ಹರೀಶ್ ಪೂಜಾರಿ, ಸದಾಶಿವ ಬಾಯರಿ, ಸುಭಾಶ್, ಸಮೀಯುಲ್ಲಾ, ಆರತಿ, ರತ್ನಾಕರ್ ಮತ್ತು ಎಲ್ಲ ಇಲಾಖೆಗಳ ಪದಾಧಿಕಾರಿಗಳು ಮತ್ತು ಎನ್‌ಪಿಎಸ್‌ ನೌಕರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!