ಕಾರ್ಕಳ : ಎಸ್‌ವಿಟಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ವರದ ಪ್ರಭು (73) ನ. 5ರಂದು ನಿಧನ ಹೊಂದಿದರು. ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಬೆಳಗುವಂತೆ ಪ್ರೋತ್ಸಾಹ ನೀಡುತ್ತಿದ್ದ ವರದ ಪ್ರಭು ಅವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದರು. ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಜಿಎಸ್‌ಬಿ ಸಮುದಾಯದ ಮದುಮಗಳಿಗೆ ಉಚಿತವಾಗಿಯೇ ಅಲಂಕಾರ ಮಾಡುವ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು. ಮೃತರು ಪತಿಯನ್ನು ಅಗಲಿದ್ದಾರೆ.
ಎಸ್‌ವಿಟಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ವರದ ಪ್ರಭು ನಿಧನ
