ನ. 11ರಂದು ಪ್ರಧಾನಿಯಿಂದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ

ಕಾರ್ಕಳದಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ರಥಕ್ಕೆ ಸ್ವಾಗತ

ಕಾರ್ಕಳ : ನಾಡಪ್ರಭು ಕೆಂಪೇಗೌಡ ಕಂಚಿನ ಪ್ರತಿಮೆ ಹಾಗೂ ಥೀಮ್‌ ಪಾರ್ಕ್‌ ನಿರ್ಮಾಣಕ್ಕೆ ಸಂಬಂಧಿಸಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ರಥವು ಶನಿವಾರ ಕಾರ್ಕಳ ತಲುಪಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನ. 11ರಂದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುತ್ತಿದ್ದು, ಪ್ರಗತಿಯ ಪ್ರತಿಮೆ ಆವರಣದಲ್ಲಿನ ಗೋಪುರ ನಿರ್ಮಾಣಕ್ಕೆ ನಾಡಿನ ಎಲ್ಲಡೆಯಿಂದ ಪವಿತ್ರ ಮಣ್ಣು ಸಂಗ್ರಹ ಮಾಡಲಾಗುತ್ತಿದೆ. ಶನಿವಾರ ಉಡುಪಿಯಿಂದ ಬೆಳ್ಮಣ್‌ ಆಗಿ ಕಾರ್ಕಳಕ್ಕೆ ರಥ ಆಗಮಿಸಿದ್ದು, ಈ ವೇಳೆ ಕಾರ್ಕಳ ಶ್ರೀ ವೆಂಕಟರಮಣ ದೇಗುಲ, ಮಾರಿಗುಡಿ ಹಾಗೂ ಅನಂತಶಯನ ದೇವಸ್ಥಾನ ವರಾಠದಿಂದ ತಂದ ಪವಿತ್ರ ಮಣ್ಣು ನೀಡಲಾಯಿತು. ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ. ಎನ್., ಪುರಸಭಾ‌ ಮುಖ್ಯಾಧಿಕಾರಿ ರೂಪ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್‌ ದೇವಾಡಿಗ, ಪುರಸಭಾ ಸದಸ್ಯರಾದ ನೀತಾ ಆಚಾರ್ಯ, ಭಾರತಿ ಅಮೀನ್‌, ನಾಮ ನಿರ್ದೇಶಿತ ಸದಸ್ಯರಾದ ಸಂತೋಷ್‌ ರಾವ್‌, ಪ್ರಸನ್ನ ದಾನಶಾಲೆ ಮತ್ತು ಪುರಸಭಾ ಮಾಜಿ ಸದಸ್ಯ ಪ್ರಕಾಶ್‌ ರಾವ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.















































































































































































error: Content is protected !!
Scroll to Top