ದೇಶದ ಮೊದಲ ಮತದಾರ ನೇಗಿ ನಿಧನ

ಕೊನೆಯ ಮತ ಚಲಾಯಿಸಿದ ಎರಡು ದಿನದ ಬಳಿಕ ಸಾವು

ಶಿಮ್ಲಾ : ದೇಶದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಗುರುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಕಿನ್ನೌರ್ ಡಿಸಿ ಅಬಿದ್ ಹುಸೇನ್ ಮಾಸ್ಟರ್ ನೇಗಿ ಅವರ ಸಾವನ್ನು ಖಚಿತಪಡಿಸಿದ್ದಾರೆ. ನೇಗಿ ಅವರಿಗೆ 106 ವರ್ಷ ವಯಸ್ಸಾಗಿತ್ತು. ಅವರು ದೇಶದಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಮೊದಲ ಮತ ಚಲಾಯಿಸಿದ್ದರೆಂಬುವುದು ಉಲ್ಲೇಖನೀಯ. ವಿಶೇಷವೆಂದರೆ ಅವರು ನವೆಂಬರ್ 2ರಂದು ಹಿಮಾಚಲ ವಿಧಾನಸಭಾ ಚುನಾವಣೆಗೆ ಬ್ಯಾಲೆಟ್ ಪೇಪರ್ ಮೂಲಕ ತನ್ನ ಕೊನೆಯ ಮತ ಚಲಾಯಿಸಿದ್ದರು.ಇದು ಅವರು ತಮ್ಮ ಜೀವನದಲ್ಲಿ ನಡೆಸಿದ 34ನೇ ಮತದಾನ.
ಅವರ ಆರೋಗ್ಯ ಬಹಳ ದಿನಗಳಿಂದ ಹದಗೆಟ್ಟಿತ್ತು. ಅಲ್ಲದೇ ಶುಕ್ರವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ನಿಧನರಾಗಿದ್ದಾರೆಂಬುವುದು ಖಚಿತವಾಗಿದೆ. ಇಂದು ಆಡಳಿತ ಮಂಡಳಿ ಅವರ ಅಂತಿಮ ಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಲಿದೆ.
ನವೆಂಬರ್ 2 ರಂದು ಮತ ಚಲಾಯಿಸಿದ ನಂತರ ಮಾತನಾಡಿದ್ದ ನೇಗಿ, ಬ್ರಿಟಿಷರಿಂದ ಮತ್ತು ರಾಜರ ಆಳ್ವಿಕೆಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇಂದು ಪ್ರಜಾಪ್ರಭುತ್ವದ ಈ ಮಹಾನ್ ಹಬ್ಬದಲ್ಲಿ ದೇಶವನ್ನು ಅಭಿವೃದ್ಧಿಪಡಿಸುವ ವ್ಯಕ್ತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಪ್ರತಿಯೊಬ್ಬ ವ್ಯಕ್ತಿಗೂ ನೀಡಲಾಗಿದೆ. ಆರೋಗ್ಯ ಹದಗೆಟ್ಟ ಕಾರಣ ಮನೆಯಿಂದಲೇ ಮತ ಚಲಾಯಿಸಿದ್ದೇನೆ. ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ನಾನು ಭಾಗಿಯಾಗಿದ್ದೇನೆ ಎಂದಿದ್ದರು.

Latest Articles

error: Content is protected !!