ಕಾರ್ಯಕರ್ತರೆ ಪಕ್ಷದ ಜೀವಾಳ – ಸಚಿವ ಸುನೀಲ್ ಕುಮಾರ್
ಹೆಬ್ರಿ: ಕಾರ್ಯಕರ್ತರೆ ಪಕ್ಷದ ಜೀವಾಳ. ಅವರ ನಿರಂತರ ಪರಿಶ್ರಮದಿಂದ ಅಭಿವೃದ್ಧಿಪರ ಕಾರ್ಯಗಳು ನಡೆಯುತ್ತಿದೆ. ಇಂತಹ ಕಾರ್ಯವೈಖರಿ ನಮ್ಮ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು. ಅವರು ನ.4ರಂದು ಮುದ್ರಾಡಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಶಕ್ತಿಕೇಂದ್ರದದ ಸಭೆಯಲ್ಲಿ ಮಾತನಾಡಿ, ಪಕ್ಷದ ಏಳಿಗೆಗೆ ಕಾರ್ಯಕರ್ತರೆ ಪ್ರಮುಖ ಕಾರಣ. ಅವರ ಸಹಕಾರದಿಂದಾಗಿ ನಾನು ರಾಜ್ಯಾದ್ಯಂತ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದರು. ಹಾಗೂ ಸರಕಾರದ ಅಭಿವೃದ್ಧಿಪರ ಕಾರ್ಯಗಳು ಮತ್ತು ಪಕ್ಷದ ಚಟುವಟಿಕೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಕಳ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ, ಸುನೀಲ್ ಕುಮಾರ್ ಅವರು ಎಲ್ಲಾ ಸಮುದಾಯದ ಜನತೆಗೆ ತಲುಪುವಂತಹ ಕಾರ್ಯಗಳನ್ನು ಮಾಡುವ ಮೂಲಕ ಇಡೀ ರಾಜ್ಯದ ಜನತೆಯ ಮೆಚ್ಚುಗೆಯನ್ನು ಪಡೆಯುತ್ತಿರುವುದು ಶ್ಲಾಘನೀಯ ಎಂದರು.
ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ಯಾಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ, ಗುರುದಾಸ ಶೆಣೈ, ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಸುರೇಶ್ ಶೆಟ್ಟಿ ಶಿವಪುರ, ಶಕ್ತಿ ಕೇಂದ್ರ ಕಾರ್ಯದರ್ಶಿ ಸುರೇಂದ್ರ ಶೆಟ್ಟಿ ವರಂಗ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಮುದ್ರಾಡಿ ಗ್ರಾ. ಪಂ. ಸದಸ್ಯ ಸಂತೋಷ್ ಶೆಟ್ಟಿ ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದು, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುಹಾಸ್ ಶೆಟ್ಟಿ ಮುಟ್ಲುಪಾಡಿ ಕಾರ್ಯಕ್ರಮ ನಿರ್ವಹಿಸಿದರು.