ಮನೆ ಮಗನಂತೆ ಮೆಚ್ಚುಗೆ ಪಡೆಯುತ್ತಿರುವ ಜನಪ್ರತಿನಿಧಿ ಸಚಿವ ಸುನೀಲ್‌ ಕುಮಾರ್‌

ಕಾರ್ಕಳ: ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ನ.3 ರಂದು ಹೆಬ್ರಿ ತಾಲೂಕಿನ ಶಿವಪುರ ಕೆರಬೆಟ್ಟಿನಲ್ಲಿ ಪಶುಪಾಲನಾ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ಜಿಲ್ಲಾ ಮಟ್ಟದ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿಯನ್ನು ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ತನ್ನ ಮಗನನ್ನು ಕಳೆದುಕೊಂಡಿದ್ದ ಹಿರಿಯ ಮಹಿಳೆಯೊಬ್ಬರು ಸಚಿವರ ಬಳಿ ಬಂದು ತನ್ನ ಸಂಕಷ್ಟವನ್ನು ಹೇಳಿಕೊಳ್ಳಲು ಮುಂದಾದಾಗ ಸಚಿವರು ಅವರ ಹೆಗಲ ಮೇಲೆ ಕೈ ಹಾಕಿ ಮನೆ ಮಗನಂತೆ ಆತ್ಮೀಯತೆಯಿಂದ ಮಾತನಾಡಿ ಅವರನ್ನು ಸಂತೈಸಿದ್ದು ಅಲ್ಲಿ ನೆರೆದಿದ್ದ ಜನರ ಗಮನ ಸೆಳೆದಿದೆ. ನಮ್ಮ ಸಮಸ್ಯೆಯನ್ನು ಯಾರಿಂದಲೋ ಶಾಸಕರಿಗೆ ಹೇಳಿಸುವ ಅಗತ್ಯವಿಲ್ಲ ನಾವೇ ನೇರವಾಗಿ ಅವರಿಗೆ ತಿಳಿಸುವಷ್ಟು ಆತ್ಮೀಯ ಭಾವವನ್ನು ಸಚಿವರು ನಮ್ಮೊಂದಿಗೆ ಹೊಂದಿದ್ದಾರೆ ಎಂದು ಅಲ್ಲಿ ನೆರೆದಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು.













































error: Content is protected !!
Scroll to Top