ಪೊಲೀಸ್ ಕಾನ್ಸ್‌ಟೆಬಲ್‌ ಹುದ್ದೆ ವಯೋಮಿತಿ 2 ವರ್ಷ ಹೆಚ್ಚಳ

ಒಂದು ಬಾರಿಗೆ ಅನ್ವಯ- ಸರ್ಕಾರ ಆದೇಶ

ಬೆಂಗಳೂರು: ಪೊಲೀಸ್ ಕಾನ್ಸ್‌ಟೆಬಲ್‌ ಹುದ್ದೆಗಳಿಗೆ ನಿಗದಿಪಡಿಸಲಾದ ವಯೋಮಿತಿಯನ್ನು ಒಂದು ಬಾರಿಗೆ ಅನ್ವಯವಾಗುವಂತೆ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಸಿವಿಲ್‌, ಸಿಎಆರ್, ಡಿಎಆರ್, ಪೊಲೀಸ್ ಕಾನ್ಸ್‌ಟೆಬಲ್‌ ನೇಮಕಾತಿ ವಯೋಮಿತಿ 2 ವರ್ಷ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2022-23ನೇ ಸಾಲಿನ ಕಾನ್ಸ್‌ಟೇಬಲ್‌ ನೇಮಕಾತಿಗೆ ಮಾತ್ರ ಇದು ಅನ್ವಯವಾಗಲಿದೆ. ರಾಜ್ಯ ಪೊಲೀಸ್ ಕಾನ್ಸ್ ಸ್ಟೇಬಲ್ ಗರಿಷ್ಟ ನೇಮಕ ವಯೋಮಿತಿ ಈ ಹಿಂದೆ ಒಂದು ಬಾರಿ ಹೆಚ್ಚಳ ಮಾಡಿದ್ದು, ಈಗ ಎರಡು ವರ್ಷಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಸಂಬಂಧ ಜಿಲ್ಲಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ನಡವಳಿ ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್) ಹುದ್ದೆ ಮತ್ತು ಪೊಲೀಸ್ ಕಾನ್ಸ್ ಟೇಬಲ್ (ಸಿಎಆರ್ ಮತ್ತು ಡಿಎಆರ್) ಹುದ್ದೆಗಳಿಗೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಒಂದು ಬಾರಿಗೆ ಮಾತ್ರ 2022-23ನೇ ಸಾಲಿನಲ್ಲಿ 3484 ಪೊಲೀಸ್ ಕಾನ್ಸ್ ಟೆಬಲ್ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪೊಲೀಸ್ ಕಾನ್ಸ್‌ಟೆಬಲ್‌ ಹುದ್ದೆಗೆ ಸಾಮಾನ್ಯ ವರ್ಗಕ್ಕೆ ಗರಿಷ್ಠ ವಯೋಮಿತಿಯನ್ನು 25 ರಿಂದ 27 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ 27 ರಿಂದ 29 ವರ್ಷಳಿಗೆ ಹಾಗೂ ಬುಡ ಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 32 ವರ್ಷಗಳಿಗೆ ಹೆಚ್ಚಿಸಲಾಗಿದೆ. ಸೇವಾ ನಿರತ ಅಭ್ಯರ್ಥಿಗಳ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳ ವಯಸ್ಸಿಗೆ 35 ಹಾಗೂ ಇತರೆ ಅಭ್ಯರ್ಥಿಗಳಿಗೆ 33 ವರ್ಷಗಳಿಗೆ ಹೆಚ್ಚಿಸಲಾಗಿದೆ. ಸಶಸ್ತ್ರ ಪಡೆಯ ಪೊಲೀಶ್ ಕಾನ್ಸ್‌ಟೆಬಲ್‌ ಹುದ್ದೆಗಳಿಗೆ ಶೇ. 10 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 31 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ 33 ವರ್ಷ ನಿಗದಿ ಪಡಿಸಲಾಗಿದೆ.





























































































































































































































error: Content is protected !!
Scroll to Top